ಸುದ್ದಿ ಕಣಜ.ಕಾಂ | KARNATAKA | TALENT
ಶಿವಮೊಗ್ಗ: ಮಹಿಳಾ ಕ್ರಿಕೆಟ್ ಕ್ರೀಡಾ ಪ್ರತಿಭೆಗಳಿಗೆ U-19 ಬಾಲಕಿಯರ ವಿಭಾಗದ ಆಯ್ಕೆ ಪಂದ್ಯಗಳಲ್ಲಿ ಪ್ರತಿನಿಧಿಸುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಕೆಎಸ್ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ಕೋರಿದ್ದಾರೆ
ಎಲ್ಲಿ ನಡೆಯಲಿದೆ ಆಯ್ಕೆ ಪ್ರಕ್ರಿಯೆ?
ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್ಸಿಎ)- ಬಿ ಸ್ಟೇಡಿಯಂ ನಲ್ಲಿ ಆಗಸ್ಟ್ 14ರ ಬೆಳಗ್ಗೆ 9.30ರಿಂದ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಮಹಿಳಾ ತಂಡಕ್ಕಾಗಿ ಮುಕ್ತ ಆಯ್ಕೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಲಾಗಿದೆ.
ಪಾಲ್ಗೊಳ್ಳಲು ಬೇಕಿರುವ ಅರ್ಹತೆ ಏನು?
2002ರ ಸೆಪ್ಟೆಂಬರ್ 1ರ ನಂತರ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ, ಆಗಮಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್ ತರುವಂತೆ ತಿಳಿಸಲಾಗಿದೆ.