ಸುದ್ದಿ ಕಣಜ.ಕಾಂ | KARNATAKA | EDUCATION
ಶಿವಮೊಗ್ಗ: ಡೆಹರಾಡೂನಿನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಎಂಟನೇ ತರಗತಿಗೆ ಪ್ರವೇಶ ಬಯಸುವವರಿಗಾಗಿ ಪರೀಕ್ಷೆ ನಡೆಸಲಾಗುತ್ತಿದೆ.
ರಾಜ್ಯದ 11-13 ವರ್ಷದೊಳಗಿನ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 18ರಂದು ನಡೆಯಲಿದ್ದು, ಅರ್ಜಿಯನ್ನು ಅಕ್ಟೋಬರ್ 5ರೊಳಗಾಗಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂರವಾಣಿ ಸಂಖ್ಯೆ 080- 25589459 ಹಾಗೂ ಶಿವಮೊಗ್ಗ ಕಚೇರಿ ದೂ.ಸಂ. 08182-220925 ಅಥವಾ ವೆಬ್ಸೈಟ್ www.rime.gov.in ಅನ್ನು ಸಂಪರ್ಕಿಸುವುದು.