ಸುದ್ದಿ ಕಣಜ.ಕಾಂ | SHIVAMOGGA CITY | CRIME
ಶಿವಮೊಗ್ಗ: ರವೀಂದ್ರನಗರದ ಎರಡನೇ ಮುಖ್ಯರಸ್ತೆಯ ಆರನೇ ಕ್ರಾಸ್ ನಲ್ಲಿ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ.
ವ್ಯಕ್ತಿಯೊಬ್ಬರು ಮೂರನೇ ಮಹಡಿಯಲ್ಲಿದ್ದ ಮನೆಗೆ ನುಗ್ಗಿದ ದೃಶ್ಯ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ನೀಲಿ ಬಣ್ಣದ ಟೀಶರ್ಟ್ ತೊಟ್ಟಿದ್ದ ಆತ ಕೃತ್ಯ ಎಸಗಿರಬಹುದು ಎನ್ನಲಾಗಿದೆ.
READ | ಬ್ಯಾಂಕಿನ ಸಿಸಿ ಕ್ಯಾಮೆರಾವನ್ನೇ ಕದ್ದ ಖದೀಮರು, ಇನ್ನೇನೆನು ಕಳವು ಮಾಡಲಾಗಿದೆ?
ಲ್ಯಾಪ್ ಟಾಪ್ ನಲ್ಲಿದ್ದವು ಪಿಎಚ್.ಡಿಯ ಪ್ರಮುಖ ದಾಖಲೆ
ಲ್ಯಾಪ್ ಟಾಪ್, ಮೊಬೈಲ್ ಕಳ್ಳತನ ಮಾಡಲಾಗಿದೆ.
ಪಿಎಚ್.ಡಿ. ದಾಖಲೆಗಳೆಲ್ಲ ಲ್ಯಾಪ್ ಟಾಪ್ ನಲ್ಲಿದ್ದವು ಎನ್ನಲಾಗಿದೆ. ಅರುಣ್ ಎಂಬುವವರಿಗೆ ಸೇರಿದ ಲ್ಯಾಪ್ ಟಾಪ್, ಜಗದೀಶ್ ಎಂಬುವವರ ಎರಡು ಮೊಬೈಲ್, ಶಿವರಾಂ ಎಂಬುವವರ ಒಂದು ಮೊಬೈಲ್ ಸೇರಿ ಅಂದಾಜು 77 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.