ಸುದ್ದಿ ಕಣಜ.ಕಾಂ | KARNATAKA | CRIME
ಮಂಗಳೂರು: ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತಿದ್ದ ಖದೀಮರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ. ಹೇರ್ ಬ್ಯಾಂಡಿನಲ್ಲಿ 5,58,900 ರೂಪಾಯಿ ಮೌಲ್ಯದ ಚಿನ್ನ ಸಾಗಣೆ ಮಾಡುತ್ತಿದ್ದರು.
https://www.suddikanaja.com/2021/06/08/accused-arrested-2/
ಹೇಗೆ ಸಾಗಿಸುತ್ತಿದ್ದ ಚಿನ್ನ, ಸಿಕ್ಕಿ ಬಿದ್ದಿದ್ದು ಹೇಗೆ?
ದುಬೈನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಮುರುಡೇಶ್ವರದ ಪ್ರಯಾಣಿಕ ಚಿನ್ನದ ತಂತಿಗಳನ್ನು ಹೇರ್ ಬ್ಯಾಂಡ್ ಒಳಗೆ ಅಡಗಿಸಿ ಸಾಗಾಟ ಮಾಡುತ್ತಿದ್ದ. ಆದರೆ, ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟ ಬಯಲಾಗಿದೆ.
ಮಿಕ್ಸರ್ ನಲ್ಲಿತ್ತು 16 ಲಕ್ಷ ಮೌಲ್ಯದ ಚಿನ್ನ!
ಒಟ್ಟು 115 ಗ್ರಾಂ ಚಿನ್ನವನ್ನು ತೆರಿಗೆ ವಂಚಿಸಿ ಸಾಗಾಟ ಮಾಡುತ್ತಿದ್ದ. ಏರ್ ಇಂಡಿಯಾ ವಿಮಾನ ಆಗಸ್ಟ್ 12ರಂದು ಆಗಮಿಸಿದ್ದ ಪ್ರಯಾಣಿಕ ಮಿಕ್ಸರ್ ಗ್ರೈಂಡರ್ನಲ್ಲಿ ₹ 16,85,087 ಮೌಲ್ಯದ 35.330 ಗ್ರಾಂ ಚಿನ್ನವನ್ನು ಸಾಗಾಟ ಮಾಡಿ ಸಿಕ್ಕಿದ್ದ. ಅದರ ಬೆನ್ನಲ್ಲೇ ಹೇರ್ ಬ್ಯಾಂಡಿನಲ್ಲಿ ಚಿನ್ನ ಸಾಗಿಸುತ್ತಿದ್ದ ಪ್ರಕರಣ ಪತ್ತೆಯಾಗಿದೆ.
https://www.suddikanaja.com/2020/12/01/man-from-west-bengal-theft-in-goldsmith-shop/