ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಎಂ.ಆರ್.ಎಸ್ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಎಫ್-4 ಹಾಗೂ ಎಫ್-8 ಫೀಡರ್ ಗಳಿಗೆ ಸಂಬಂಧಿಸಿದಂತೆ 11 ಕೆವಿ ಮಾರ್ಗದ ಸ್ಥಳಾಂತರದ ಕಾಮಗಾರಿ ಇರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ಆಗಸ್ಟ್ 31 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಡಿ.ವಿ.ಎಸ್ ವೃತ್ತ, ಎನ್.ಇ.ಎಸ್ ಕಾಲೇಜು, ಕುವೆಂಪು ರಂಗಮಂದಿರ, ಲೂರ್ದು ನಗರ, ಮಹಾನಗರ ಪಾಲಿಕೆ, ಸಿಟಿ ಕ್ಲಬ್, ಹೊಳೆಬೆನವಳ್ಳಿ, ಪಿಳ್ಳಂಗೆರೆ, ಜಾವಳ್ಳಿ, ಹಸೂಡಿ, ಹಸೂಡಿ ಫಾರಂ, ಚಿಕ್ಕಮರಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.