ಸುದ್ದಿ ಕಣಜ.ಕಾಂ | DISTRICT | AWARD
ಶಿವಮೊಗ್ಗ: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ(ಮ್ಯಾಮ್ ಕೋಸ್)ವು ಸದಸ್ಯರ ಮಕ್ಕಳಿಗೆ ಪ್ರತಿ ವರ್ಷದಂತೆ ಪ್ರಸ್ತುತ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
https://www.suddikanaja.com/2021/08/20/pneumococcal-conjugate-vaccine-to-all-childern/
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬೆಳ್ಳಿಹಬ್ಬದ ಪಾರಿತೋಷಕ ಹಾಗೂ ಪದವಿ ಬಿ.ಎ., ಬಿ.ಎಸ್ಸಿ, ಬಿಕಾಂ ಅಥವಾ ಬಿಬಿಎಂ, ಬಿಎಸ್ಸಿ (ಕೃಷಿ ಅಥವಾ ತೋಟಗಾರಿಕೆ) ಬಿ.ವಿ.ಎಸ್ಸಿ/ ಬಿ.ಎಫ್.ಎಸ್.ಸಿ/ ಬಿ.ಟೆಕ್.ಡೈರಿ/ ಎಂ.ಬಿ.ಬಿ.ಎಸ್/ಬಿ.ಯು.ಎಂ.ಎಸ್/ಬಿ.ಎಚ್.ಎಂ.ಎಸ್/ಬಿ.ಎ.ಎಂ.ಎಸ್/ ಬಿ.ಎಸ್.ಎಂ.ಎಸ್./ಬಿ.ಎನ್.ವೈ.ಎಸ್./ಬಿ.ಡಿ.ಎಸ್./ಬಿ.ಪಿ.ಟಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸುವರ್ಣ ಮಹೋತ್ಸವ ಪಾರಿತೋಷಕ ನೀಡಲಾಗುವುದು. ಸ್ನಾತಕೋತ್ತರ ಪದವಿಗಳಾದ ಎಂ.ಎ/ಎಂ.ಕಾಂ. ಅಥವಾ ಎಂ.ಸಿ.ಎ/ಎಂ.ಎಸ್.ಸಿ/ಎಂ.ಬಿ.ಎ. ಪದವಿಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಜ್ರ ಮಹೋತ್ಸವ ಪಾರಿತೋಷಕ ಹಾಗೂ ರಾಜ್ಯ/ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪುರಸ್ಕಾರ ಪಡೆದ ಸದಸ್ಯರ ಮಕ್ಕಳಿಗೆ ಪಾರಿತೋಷಕವನ್ನು ನೀಡಲು ತೀರ್ಮಾನಿಸಿದ್ದು, ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸದಸ್ಯರು ವಿದ್ಯಾರ್ಥಿಗಳ ಅರ್ಜಿ ಮತ್ತು ಅಂಕ ಪಟ್ಟಿಯ ಪ್ರತಿಯನ್ನು ನವೆಂಬರ್ 30 ರೊಳಗಾಗಿ ಸಂಘದ ಶಾಖೆಗಳಿಗೆ ಅಥವಾ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಮ್ಯಾಮ್ ಕೋಸ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.suddikanaja.com/2021/04/05/gopishettikoppa-invites-you-to-apply-for-shelter-soon/