ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಬೀಟೆ ನಾಟಾ ವಶ

 

 

ಸುದ್ದಿ ಕಣಜ.ಕಾಂ | TALUK | FOREST
ಸಾಗರ: ತಾಲೂಕಿನ ಹಕ್ರೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟೆ ನಾಟಾ ವಶಕ್ಕೆ ಪಡೆಯಲಾಗಿದೆ.
ಗ್ರಾಮದ ನಿವಾಸಿಯಾಗಿರುವ ಸಂತೋಷ್ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಬೀಟೆ ನಾಟಾ ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರ ದಳದ ಪೊಲೀಸರು ಮರದ 4 ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.+

READ | ದೇವರ ದರ್ಶನ ಪಡೆದು ವಾಪಸ್ ಬರುವಾಗ ಧಗಧಗನೇ ಹೊತ್ತಿ ಉರಿದ ಬೆಂಚ್ ಕಾರು

ಜಪ್ತಿ ಮಾಡಿಕೊಂಡಿರುವ ನಾಟಾದ ಮೌಲ್ಯದ ಅಂದಾಜು 1.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಜಪ್ತಿ ಮಾಡಿಕೊಳ್ಳಲಾಗಿದೆ. ಸಂಚಾರ ದಳದ ಪಿಎಸ್.ಐ ಮಲ್ಲಿಕಾರ್ಜುನ್, ದಫೇದಾರ್ ವಿಶ್ವನಾಥ್, ರತ್ನಾಕರ್, ಗಿರೀಶ್, ಶಿವರುದ್ರಪ್ಪ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

error: Content is protected !!