ಸುದ್ದಿ ಕಣಜ.ಕಾಂ | TALUK | CRIME
ಸಾಗರ: ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ವರದಿ ತರುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಆದರೆ, ಇದನ್ನು ಮೀರಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿದ್ದ ಕಾರಣಕ್ಕೆ ಜೋಗ ಜಲಪಾತದ ಏಳು ಜನ ಭದ್ರತಾ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ.
https://www.suddikanaja.com/2021/04/11/maintenance-problem-in-jog-falls/
ಕೊರೊನಾ ವೈರಸ್ ಸೋಂಕಿಗೆ ಬ್ರೇಕ್ ಹಾಕುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 72 ಗಂಟೆಯೊಳಗಿನ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ, ಇದಕ್ಕೆ ಕಿಮ್ಮತ್ತು ನೀಡದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಶಾಕ್ ನೀಡಲಾಗಿದೆ.
ಯಾರ‌್ಯಾರ ವಿರುದ್ಧ ದಾಖಲಾಯ್ತು ಕೇಸ್?
ಜೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳು ಸಿಬ್ಬಂದಿ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ದೂರು ದಾಖಲಾಗಿದೆ.
ಭದ್ರತಾ ಸಿಬ್ಬಂದಿಯಾದ ಚಂದ್ರಶೇಖರ್, ಮಂಜುನಾಥ್, ಕೃಷ್ಣಪ್ಪ, ಮಂಜುನಾಥ್, ರಾಕೇಶ್, ಪ್ರಭುದಾಸ್ ಹಾಗೂ ಸಂಜು ಮೇಲೆ ಪ್ರಕರಣ ದಾಖಲಾಗಿದೆ.
ಪ್ರವಾಸಿಗರ ಸೋಗಿನಲ್ಲಿ ಬಂದ ಡಿಎಸ್‌ಪಿ ತಂಡ
ಸಾಗರ ಡಿ.ಎಸ್.ಪಿ ನೇತೃತ್ವದಲ್ಲಿ ಪೊಲೀಸರ ತಂಡ ಗುರುವಾರ ಪ್ರವಾಸಿಗರ ಸೋಗಿನಲ್ಲಿ ಜೋಗಕ್ಕೆ ಭೇಟಿ ನೀಡಿದೆ. ಎರಡು ಡೋಸ್ ಲಸಿಕೆ ಆಗಿದೆ ಎಂದು ಪ್ರಮಾಣ ಪತ್ರ ಕೂಡ ತೋರಿಸಿದ್ದಾರೆ. ಆದರೆ, ಆರ್.ಟಿ.ಪಿ.ಸಿಆರ್ ನೆಗೆಟಿವ್ ವರದಿ ಇಲ್ಲ. ಒಳಗಡೆ ಬಿಡುವಂತೆ ಕೋರಿದ್ದಾರೆ. ಬಳಿಕ ಆಮೀಷಕ್ಕೆ ಒಳಗಾಗಿ ಅವರನ್ನು ಜೋಗ ಪರಿಸರಕ್ಕೆ ಬಿಡಲು ಒಪ್ಪಿದ್ದಾರೆ. ತದನಂತರ, ಸಿಬ್ಬಂದಿಯ ಮೇಲೆ ದೂರು ನೀಡಿದ್ದು ಅದರನ್ವಯ ಜೋಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/07/25/atrocity-case-filed-against-23-persons/