ಶಿವಮೊಗ್ಗದಲ್ಲಿ ಇದೇ ಮೊದಲು ಒಂದಕ್ಕಿಳಿದ ಕೊರೊ‌ನಾ ಸೋಂಕು, ತಾಲೂಕುವಾರು ಹೇಗಿದೆ ಸ್ಥಿತಿ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನಲ್ಲಿ ಇದೇ ಮೊದಲ ಸಲ ಕೊರೊನಾ ಸೋಂಕಿತರ ಸಂಖ್ಯೆ ಒಂದಕ್ಕೆ ಇಳಿದಿದೆ. ಬಾಹ್ಯ ರಾಜ್ಯಗಳ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.
ಸೋಮವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ 20 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 44 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ.

READ | ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯದ ಶುಂಠಿ, ನಾಟಾ, ಭತ್ತ

ತಾಲೂಕುವಾರು ವರದಿ‌ | ಶಿವಮೊಗ್ಗದಲ್ಲಿ‌ 1, ಭದ್ರಾವತಿ 4, ಶಿಕಾರಿಪುರ 0, ತೀರ್ಥಹಳ್ಳಿ 8, ಸೊರಬ 0, ಹೊಸನಗರ 1, ಸಾಗರ 6 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 5,586 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 1,725 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಎಲ್ಲಿ ಎಷ್ಟು ಜನ ಚಿಕಿತ್ಸೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 63 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್‍ಸಿ 36, ಕೋವಿಡ್ ಕೇರ್ ಸೆಂಟರ್ ನಲ್ಲಿ 26, ಖಾಸಗಿ ಆಸ್ಪತ್ರೆಯಲ್ಲಿ 21, ಹೋಮ್ ಐಸೋಲೇಷನ್ ನಲ್ಲಿ 225 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 2 ಸೋಂಕಿತರಿದ್ದಾರೆ. 373 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

https://www.suddikanaja.com/2021/07/20/two-taluk-zero-corona-positive/

error: Content is protected !!