ಶಾಲಾ, ಕಾಲೇಜುಗಳು ಹೌಸ್ ಫುಲ್, ಶಿವಮೊಗ್ಗದಲ್ಲಿ ಹೈ, ಶಿಕಾರಿಪುರದಲ್ಲಿ ಲೋ ಸಂಖ್ಯಾ ಬಲ, ಕ್ಲಾಸಿಗೆ ಬಂದ‌ ಮಕ್ಕಳೇನು ಹೇಳ್ತಾರೆ?

 

 

ಸುದ್ದಿ ಕಣಜ.ಕಾಂ | DISTRICT | EDUCATION
ಶಿವಮೊಗ್ಗ: ಕೋವಿಡ್ ಕಾಯಿಲೆಯಿಂದಾಗಿ ಸಂಪೂರ್ಣ ಸ್ತಬ್ದಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳಿಗೆ ಮರುಜೀವ ಬಂದಿದೆ. ಕಳೆದ ಎರಡು ದಿನಗಳಿಂದ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಆಗಮಿಸುತಿದ್ದಾರೆ.

https://www.suddikanaja.com/2020/11/10/netherlands-parcel/

ಜಿಲ್ಲೆಯಲ್ಲಿ ಮಂಗಳವಾರ ಶೇ.76.61ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಅತ್ಯಧಿಕ ಶೇ.82.76ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಆದರೆ, ಶಿಕಾರಿಪುರದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ.
9ನೇ ತರಗತಿಯಲ್ಲಿ‌ 24,446ರಲ್ಲಿ 18,628 ಹಾಗೂ 10ನೇ ತರಗತಿಯಲ್ಲಿ 25,483 ಒಟ್ಟು ದಾಖಲಾತಿಯಲ್ಲಿ 19,642 ವಿದ್ಯಾರ್ಥಿಗಳು ಶಾಲೆಗೆ ಎರಡನೇ ದಿ‌ನ ಆಗಮಿಸಿದ್ದಾರೆ.
ವಿದ್ಯಾರ್ಥಿಗಳೇನು ಹೇಳುತ್ತಾರೆ?
ಶಾಲೆಗೆ ಆಗಮಿಸಿರುವ ವಿದ್ಯಾರ್ಥಿಗಳನ್ನು ವಿಚಾರಿಸಲಾಗಿ ಅದರಲ್ಲಿ ಬಹುತೇಕರು ನೀಡುವ ಕಾರಣವೇನೆಂದರೆ, ‘ಮನೆಯಲ್ಲಿ ಕುಳಿತು ಬೇಜಾರಾಗಿದೆ, ಸ್ನೇಹಿತರು ಸಿಗುತ್ತಿರಲಿಲ್ಲ, ಆನ್ಲೈನ್ ಕ್ಲಾಸ್ ಕೇಳಿ ಕೇಳಿ ಸಾಕಾಗಿದೆ, ಅರ್ಥವೇ ಆಗುವುದಿಲ್ಲ.’ ಜತೆಗೆ, ಮಕ್ಕಳನ್ನು ನಿಯಂತ್ರಿಸಿ ಪೋಷಕರು ಬೇಸತ್ತಿದ್ದಾರೆ. ಹೀಗಾಗಿ, ಮೊದಲೆರಡು ದಿನಗಳಲ್ಲಿಯೇ ತರಗತಿಗಳು ಹೌಸ್ ಫುಲ್ ಆಗಿವೆ.
ಯಾವ ತಾಲೂಕಿನಲ್ಲಿ ಎಷ್ಟು ಸಂಖ್ಯಾ‌ಬಲ?
ಭದ್ರಾವತಿ ಶೇ.70.40, ಹೊಸನಗರ ಶೇ.77.63, ಸಾಗರ ಶೇ.79.60, ಶಿಕಾರಿಪುರ ಶೇ.65.54, ಶಿವಮೊಗ್ಗ ಶೇ.82.76, ಸೊರಬ ಶೇ.82.35, ತೀರ್ಥಹಳ್ಳಿ ಶೇ.72 ವಿದ್ಯಾರ್ಥಿಗಳು ತರಗತಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಡಿಡಿಪಿಐ ಹೇಳಿದ್ದಾರೆ.

https://www.suddikanaja.com/2020/11/22/demand-raise-for-historical-authority-in-shikaripura/

error: Content is protected !!