ಲಾರಿಯ ಚಕ್ರಕ್ಕೆ ಸಿಲುಕಿ ಶಿಕ್ಷಕ ಸಾವು

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಲಾರಿಯ ಚಕ್ರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ವಿನೋಬನಗರದ 100 ಅಡಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಕೃಷಿ ನಗರ ನಿವಾಸಿ ಹಾಗೂ ಗೋಪಾಳದ ಕೆ.ಎಚ್.ಬಿ. ಸರ್ಕಾರಿ ಶಾಲೆಯ ಶಿಕ್ಷಕ ರಂಗನಾಥ್(47) ಮೃತಪಟ್ಟಿದ್ದಾರೆ.
ಲಾರಿಯ ಹಿಂಬದಿ ಚಕ್ರಕ್ಕೆ ತಲೆ ಸಿಲುಕಿದ್ದು, ಹೆಲ್ಮೆಟ್ ಹಾಕಿದ್ದರೂ ತಲೆಯ ಭಾಗ ಛಿದ್ರವಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!