ಆಟೋ ಚಾಲಕರನ್ನು ಸಂಸದ ರಾಘವೇಂದ್ರ ಹೊಗಳಿದ್ದೇಕೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೇವಾ ಭಾರತಿ, ಪ್ರೇರಣಾ ಟ್ರಸ್ಟ್ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಆಟೋ ಚಾಲಕರನ್ನು ಹೊಗಳಿದರು.

READ | ಜೋಗ, ಸಿಗಂದೂರು, ಚಿತ್ರದುರ್ಗಕ್ಕೆ ಟೂರ್ ಪ್ಯಾಕೇಜ್, ಶುಲ್ಕ ಎಷ್ಟು?

‘ಆಟೋ ಚಾಲಕರು ಪ್ರವಾಸಿಗರಿಗೆ ಸಕಾಲಿಕ ಸೇವೆ ನೀಡುತಿದ್ದಾರೆ. ಈ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಸ್ನೇಹದಿಂದ ಪ್ರವಾಸಿಗರೊಂದಿಗೆ ವ್ಯವಹರಿಸುವ ಶ್ರಮಜೀವಿ ಆಟೋ ಚಾಲಕರು ಜಿಲ್ಲೆಯ ರಾಯಭಾರಿಗಳ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಸೋಂಕಿನ ಮೊದಲ ಹಂತದಲ್ಲಿ 5,000 ರೂಪಾಯಿ ಹಾಗೂ ಎರಡನೇ ಹಂತದಲ್ಲಿ 3,000 ರೂಪಾಯಿಗಳ ಆರ್ಥಿಕ ನೆರವನ್ನು ನೀಡಲಾಗಿದೆ ಎಂದರು.

READ | ವಿಶ್ವವಿಖ್ಯಾತ ಜೋಗ ವೀಕ್ಷಿಸಲು ಬಂದ ಸಾವಿರಾರು ಜನ, ಸ್ಥಳೀಯರಲ್ಲಿ‌ ಮನೆ ಮಾಡಿದ ಭೀತಿ! ಜೋಗ ವೀಕ್ಷಣೆಗೆ ಗಂಟೆಗಟ್ಟಲೇ ಸರದಿ

750 ಆಟೋ ಚಾಲಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು. ಅಜ್ಗರ್ ಪಾಶಾ, ಶಫೀ, ಅಬ್ದುಲ್‍ ಗನಿ, ಮಾಲತೇಶ್, ಬಳ್ಳೆಕೆರೆ ಸಂತೋಷ್, ಬಾಶಾ, ಗುರುರಾಜ್ ಉಪಸ್ಥಿತರಿದ್ದರು.

https://www.suddikanaja.com/2021/07/29/private-ticket-25-percent-hike-will-decide-soon-said-by-dc-shivakumar/

error: Content is protected !!