ಸುದ್ದಿ ಕಣಜ.ಕಾಂ | TALENT | STARTUP
ಶಿವಮೊಗ್ಗ: ನಗರದ ಪಿಇಎಸ್ ಇನ್ ಸ್ಟಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಗಣಕ ಯಂತ್ರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಟ್ರೈ ಕ್ಯಾಬಿ (TRI-CABBY) ವಿನ್ಯಾಸಗೊಳಿಸಿದ್ದಾರೆ.
https://www.suddikanaja.com/2021/03/01/khelo-india-winter-games-2-golds-won-by-shivamogga-girls/
ಇದನ್ನು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಉದ್ಘಾಟಿಸಿದ್ದು, ವಿದ್ಯಾರ್ಥಿಗಳ ಸೃಜನಾತ್ಮಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏನಿದು ಟ್ರೈ ಕ್ಯಾಬಿ (TRI-CABBY)
‘ಟ್ರೈ ಕ್ಯಾಬಿ’ವೊಂದು ಸ್ಟರ್ಟ್ ಅಪ್ ಕಂಪೆನಿಯಾಗಿದ್ದು, ಪ್ರಪ್ರಥಮವಾಗಿ ಶಿವಮೊಗ್ಗದಲ್ಲಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಟ್ಯಾಕ್ಸಿ ಸೇವೆಯನ್ನು ಒದಗಿಸುವ ವೇದಿಕೆಯನ್ನು ಸೃಷ್ಟಿಸಿದೆ. ಮೊಬೈಲ್ ಬಳಸಿ ಆನ್ ಲೈನ್ ನಲ್ಲಿ ಕ್ಯಾಬ್ ಅನ್ನು ಕಾಯ್ದಿರಿಸಿ, ನಿರ್ದಿಷ್ಟ ಸ್ಥಳವನ್ನು ತಲುಪುವಲ್ಲಿ ಇದು ಉಪಯುಕ್ತವಾಗಲಿದೆ.
https://www.suddikanaja.com/2021/04/15/kannada-movie-releasing-on-april-16/
ಸ್ಟಾರ್ಟ್ ಅಪ್ ಅನ್ನು ಕಾಲೇಜಿನ ಪ್ರಥಮ ವರ್ಷದ ಗಣಕ ಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಎ.ಶ್ರವಣ್, ಶಾಲೋಮ್, ಸಾತ್ವಿಕ್ ಜಿ.ಹೆಗಡೆ ಹಾಗೂ ಸಾತ್ವಿಕ್ ಪಾಟೀಲ್ ಅವರು ಕಾಲೇಜಿನ ಇಡಿಸಿ ಸೆಲ್ ಸಹಕಾರದೊಂದಿಗೆ ಯೋಜನೆಯನ್ನು ರೂಪಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ನಾವಿನ್ಯತೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಾಗಿದೆ.
ಉದ್ಘಾಟನೆ ಸಮಾರಂಭದಲ್ಲಿ ಸಂಸದ ಹಾಗೂ ಪಿಇಎಸ್ ಸಂಸ್ಥೆಯ ಟ್ರಸ್ಟಿ ಬಿ.ವೈ.ರಾಘವೇಂದ್ರ ಅವರು ಮಾರ್ಗದರ್ಶಕ ಗಣಿತ ವಿಭಾಗದ ಮುಖ್ಯಸ್ಥ ಡಾ. ಎಸ್. ಟಿ. ಅವೀಶ್ ಅವರನ್ನು ಅಭಿನಂದಿಸಿದರು. ಪಿಇಎಸ್ ಐಟಿಎಂ ಪ್ರಾಂಶುಪಾಲ ಡಾ. ಎಂ.ವಿ. ಚೈತನ್ಯಕುಮಾರ್ ಉಪಸ್ಥಿತರಿದ್ದರು.
https://www.suddikanaja.com/2021/08/24/bike-invention/