ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜು ಆಗುವ ಎಎಫ್ 12, ಎಎಫ್ 13 ಮತ್ತು ಎಎಫ್ 19ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ಆಗಸ್ಟ್ 22ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ಪವರ್ ಕಟ್ ಆಗಲಿದೆ?
ಆಲ್ಕೋಳ ನಂದಿನಿ ಬಡಾವಣೆ, ವಿಕಾಸ ಶಾಲೆ ಹತ್ತಿರ, ಕನಕ ಲೇಔಟ್, ಸಹಕಾರಿ ನಗರ, ಗೋಕುಲ್ ಲೇಔಟ್, ದೀಪಕ್ ಲೇಔಟ್, ಸೋಮಿನಕೊಪ್ಪ, ಆದರ್ಶನಗರ, ಭೋವಿ ಕಾಲೊನಿ, ವಿಜಯಲಕ್ಷ್ಮೀ ಲೇಔಟ್, ಸಹ್ಯಾದ್ರಿನಗರ, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಪಶು ವೈದ್ಯಕೀಯ ಕಾಲೇಜು, ಹನುಮಂತನಗರ, ಅಂಬೇಡ್ಕರ್ ಕಾಲೊನಿ, ಜಲ್ಲಿ ಕ್ರಷರ್ಸ್, ಶಿವ ಸಾಯಿ ಕ್ಯಾಸ್ಟಿಂಗ್, ಬೈರನಕೊಪ್ಪ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.