ಸುದ್ದಿ ಕಣಜ.ಕಾಂ | NATIONAL | CRIME
ತಮಿಳುನಾಡು: ಪತಿಯ ಮೇಲಿನ ಸಿಟ್ಟನ್ನು ಹೆತ್ತ ಕಂದಮ್ಮನ ಮೇಲೆ ತೋರಿಸಿ, ಬಾಸುಂಡೆ, ರಕ್ತ ಗಾಯಗಳಾಗುವಂತೆ ಹೊಡೆದಿದ್ದ ತಾಯಿಯನ್ನು ಬಂಧಿಸಲಾಗಿದೆ.
https://www.suddikanaja.com/2020/12/12/mother-killed-her-own-child-in-bengaluru/
ಒಂದೂವರೆ ವರ್ಷದ ಮಗುವಿಗೆ ಚಪ್ಪಲಿಯಿಂದ ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಹೊಡೆದು, ಮುಷ್ಠಿ ಕಟ್ಟಿ ಮಗುವಿನ ಬಾಯಿಯ ಮೇಲೆ ಜಜ್ಜಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಂತರ, ತಮಿಳುನಾಡು ಪೊಲೀಸರು ಆಂಧ್ರಪ್ರದೇಶದಲ್ಲಿರುವ ಆಕೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ವಿವಾಹವಾಗಿ ನಾಲ್ಕು ವರ್ಷವಾಗಿತ್ತು
ಆಂಧ್ರಪ್ರದೇಶದ ಚಿತ್ತೂರಿನಲ್ಲಿದ್ದ ತುಳಸಿ (22) ಎಂಬಾಕೆಯೇ ಮಗುವವನ್ನು ಹಿಂಸಿಸಿ ಜೈಲು ಪಾಲಾದ ಮಹಿಳೆ. ಈಕೆಯು ತಮಿಳುನಾಡಿನ ವಡಿವಜಗನ್ ಎಂಬಾತನಿಗೆ ವಿವಾಹವಾಗಿದ್ದಳು. ತಮಿಳುನಾಡಿನಲ್ಲಿಯೇ ನೆಲೆಸಿದ್ದರು. ಮದುವೆಯಾಗಿ ನಾಲ್ಕು ವರ್ಷವಾಗಿದ್ದು ದಾಂಪತ್ಯ ಜೀವನದ ಕುರುಹಾಗಿ ಗೋಕುಲ್(4) ಹಾಗೂ ಪ್ರದೀಪ್ (ಒಂದೂವರೆ ವರ್ಷ) ಇಬ್ಬರು ಮಕ್ಕಳಿದ್ದಾರೆ.
ಪತಿ ಪತ್ನಿಯ ನಡುವೆ ಗಲಾಟೆಯಾಗಿದ್ದು, ಪತಿಯು ಪತ್ನಿಯಾದ ತುಳಸಿಯನ್ನು ಆಂಧ್ರಪ್ರದೇಶದ ತವರು ಮನೆಗೆ ಕಳುಹಿಸಿದ್ದ. ಅಲ್ಲಿ ಕಂದಮ್ಮನ ಮೇಲೆ ಹಿಂಸೆ ಮಾಡಿದ್ದಾಳೆ. ಈ ವಿಡಿಯೋ ಹೃದಯ ಕಲಕುವಂತಿದ್ದು, ತುಳಸಿಯ ಪತಿಯ ಸಂಬಂಧಿಕರು ಅದನ್ನು ವೀಕ್ಷಿಸಿ ವಡಿವಜಗನ್ ಅವರ ಗಮನಕೆಕ ತಂದಿದ್ದಾರೆ. ಬಳಿಕ ಆಕೆಯ ವಿರುದ್ಧ ದೂರು ದಾಖಲಾಗಿದೆ.
(AGENCY NEWS)
https://www.suddikanaja.com/2020/11/07/new-born-baby/