ಸುದ್ದಿ ಕಣಜ.ಕಾಂ | DISTRICT | EDUCATION
ಶಿವಮೊಗ್ಗ: ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಂಜೆ ಕಾಲೇಜು’ ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಡಿ.ಎಸ್. ಅರುಣ್, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಕೇವಲ 11ರಲ್ಲಿ ಮಾತ್ರ ಸಂಜೆ ಕಾಲೇಜುಗಳಿವೆ. ಶಿವಮೊಗ್ಗಕ್ಕೂ ಸಂಜೆ ಕಾಲೇಜು ಲಭಿಸಿದ್ದು ಸಂಸತದ ವಿಚಾರವಾಗಿದೆ ಎಂದರು.
ಯಾವ್ಯಾವ ಕೋರ್ಸ್ ಗಳು ಲಭ್ಯ?
ಸರ್ಕಾರದಿಂದ ಅನುಮತಿ ದೊರೆತಿದ್ದು, ಶೀಘ್ರವೇ ಪ್ರವೇಶಾತಿ ಕೂಡ ಆರಂಭವಾಗಲಿದೆ. ಕಾಲೇಜಿನ ವೇಳಾಪಟ್ಟಿಯೂ ಗೊತ್ತಾಗಲಿದೆ. ಆರಂಭದಲ್ಲಿ ಬಿಕಾಂ ಮತ್ತು ಬಿಸಿಎ ತರಗತಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
https://www.suddikanaja.com/2021/07/20/mba-course-in-ksou/
ಎನ್.ಇ.ಪಿ ಅನ್ವಯ ಕೋರ್ಸ್
ನೂತನ ಶಿಕ್ಷಣ ನೀತಿ(ಎನ್.ಇ.ಪಿ) ಯನ್ನು ಕಾಲೇಜಿನಲ್ಲಿ ಜಾರಿಗೊಳಿಸಲಾಗುವುದು. ಇದರ ಅನ್ವಯ ಮೂರು ವರ್ಷ ಪದವಿ, ಒಂದು ವರ್ಷ ಆನರ್ಸ್ ಸೇರಿ ನಾಲ್ಕು ವರ್ಷದ ಪದವಿ ಇರಲಿದೆ. ಆನರ್ಸ್ ಪದವಿ ಪ್ರಮಾಣ ಪತ್ರ ಪಡೆದವರು ನೇರವಾಗಿ ಪಿ.ಎಚ್.ಡಿ. ಪ್ರವೇಶ ಪಡೆಯಬಹುದಾಗಿದೆ. ಇದರೊಂದಿಗೆ ಕೌಶಲ ಅಭಿವೃದ್ಧಿಗೂ ಒತ್ತು ನೀಡಲಾಗುವುದು. ಅದಕ್ಕೆ ಪೂರಕವಾಗಿ ಸೆಮಿಸ್ಟರ್ ಪದ್ಧತಿಗೆ ಕ್ರೆಡಿಟ್ ನೀಡಲಾಗುವುದು. ಸರ್ಟಿಫಿಕೇಟ್ ಕೋರ್ಸ್ ಗೂ ಅವಕಾಶ ನೀಡಲಾಗುವುದು ಎಂದರು.
READ | ಬಾಲಕಿಯನ್ನು ಚುಡಾಯಿಸಿದವರಿಗೆ ಬುದ್ಧಿ ಹೇಳಿದಕ್ಕೆ ಪರಿಸರ ಪ್ರೇಮಿಯ ಮೇಲೆ ನಡೀತು ಹಲ್ಲೆ
ಸೆಪ್ಟೆಂಬರ್ 6 ರಿಂದ ಪ್ರವೇಶಾತಿ ಆರಂಭವಾಗಲಿದೆ. ಪ್ರಸಕ್ತ ಸಾಲಿನಲ್ಲಿ 3,000ಕ್ಕೂ ಅಧಿಕ ದಾಖಲಾತಿ ಪಡೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಅಂಕ, ಮೀಸಲಾತಿ ಆಧಾರದ ಮೇಲೆ ಸೀಟ್ ಹಂಚಿಕೆ ಮಾಡಲಾಗುವುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುರೇಖಾ ಮುರಳೀಧರ್, ಅನಂತಶಾಸ್ತ್ರಿ, ಪ್ರಮುಖರಾದ ಡಾ. ಚನ್ನೇಶ್, ಎಸ್.ಎಚ್. ಪ್ರಸನ್ನ, ವಿಜಯಕುಮಾರ್ ಉಪಸ್ಥಿತರಿದ್ದರು.
https://www.suddikanaja.com/2021/07/09/new-course-starts-in-jnnce/