ಭಾರತೀಯ ಒಲಿಂಪಿಕ್ಸ್ ಹಾಕಿ ತಂಡದ ಸಹಾಯಕ ಕೋಚ್‍ಗೆ ಶಿವಮೊಗ್ಗದಲ್ಲಿ ಸನ್ಮಾನ, ಬಿ.ಎಸ್. ಅಂಕಿತಾ ಶಿವಮೊಗ್ಗ ಬಗ್ಗೆ ಹೇಳಿದ್ದೇನು?

ಸುದ್ದಿ ಕಣಜ.ಕಾಂ | KARNATAKA | SPORTS
ಶಿವಮೊಗ್ಗ: ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಶಿವಮೊಗ್ಗ ಮೂಲದ ಬಿ.ಎಸ್. ಅಂಕಿತಾ ಅವರನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೋಮವಾರ ಅಭಿನಂದಿಸಿದರು.

https://www.suddikanaja.com/2021/08/04/tokyo-olympics-review/

ಒಲಿಂಪಿಕ್ಸ್‌ ನಲ್ಲಿ ಸೆಮಿಫೈನಲ್ ತಲುಪಿದ್ದ ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದ ತಾವು ಶಿವಮೊಗ್ಗ ಮೂಲದವರು ಎಂಬುವುದು ಜಿಲ್ಲೆಯ ಹೆಮ್ಮೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಜಿಲ್ಲಾಧಿಕಾರಿ ಹಾರೈಸಿದರು.
ನಾನು ಶಿವಮೊಗ್ಗದವಳು ಎನ್ನುವುದಕ್ಕೆ ಹೆಮ್ಮೆ ಇದೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಕಿತಾ, ‘ನಾನು ಶಿವಮೊಗ್ಗದವಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತಿದೆ. ಒಲಿಂಪಿಕ್ಸ್‌ ನಲ್ಲಿ ಸಾಧನೆ ಮಾಡಿದ ತಂಡದ ಭಾಗವಾಗಿದ್ದು ಅವಿಸ್ಮರಣೀಯ ಅನುಭವ. ಶಿವಮೊಗ್ಗದಲ್ಲಿ ಪ್ರತಿಭಾವಂತ ಹಾಕಿ ಆಟಗಾರರು ಇದ್ದಾರೆ. ಕೆಲವರು ರಾಷ್ಟ್ರೀಯ ಮಟ್ಟದಲ್ಲೂ ಪ್ರತಿನಿಧಿಸುತ್ತಿದ್ದಾರೆ. ಇನ್ನಷ್ಟು ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಗುರಿ ಇದೆ. ಶಿವಮೊಗ್ಗದಲ್ಲಿ ಉತ್ತಮ ಹಾಕಿ ಮೈದಾನ ಸೌಲಭ್ಯ ಕಲ್ಪಿಸಿದರೆ ಉತ್ತಮ ಆಟಗಾರರನ್ನು ಹೊರ ತರಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಅಂಕಿತಾ ಅವರ ಕುಟುಂಬದ ಸದಸ್ಯರು ಹಾಜರಿದ್ದರು.

https://www.suddikanaja.com/2021/08/08/celebration-for-winning-gold-in-olympic/