ಸುದ್ದಿ ಕಣಜ.ಕಾಂ | DISTRICT | HEALTH
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ, ಶಿಕಾರಿಪುರ ಮತ್ತು ಹೊಸನಗರದಲ್ಲಿ ಶನಿವಾರ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ ಆಗಿಲ್ಲ.
https://www.suddikanaja.com/2020/12/11/covid-in-shivamogga/
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಶನಿವಾರ 25 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 18 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 12, ಭದ್ರಾವತಿ 0, ಶಿಕಾರಿಪುರ 0, ತೀರ್ಥಹಳ್ಳಿ 5, ಸೊರಬ 1, ಹೊಸನಗರ 0, ಸಾಗರ 5 ಸೋಂಕು ಇರುವುದು ಪತ್ತೆಯಾಗಿದೆ ಮತ್ತು ಬಾಹ್ಯ ಜಿಲ್ಲೆಯ ಎರಡು ಪ್ರಕರಣ ಪತ್ತೆಯಾಗಿವೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,004 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 3,226 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಎಲ್ಲಿ ಎಷ್ಟು ಜನ ಚಿಕಿತ್ಸೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 10, ಕೋವಿಡ್ ಕೇರ್ ಸೆಂಟರ್ ನಲ್ಲಿ 13, ಖಾಸಗಿ ಆಸ್ಪತ್ರೆಯಲ್ಲಿ 8,ಹೋಮ್ ಐಸೋಲೇಷನ್ ನಲ್ಲಿ 158 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 00 ಸೋಂಕಿತರಿದ್ದಾರೆ. 240 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.