ಸುದ್ದಿ ಕಣಜ.ಕಾಂ | CITY | EDUCATION CORNER
ಶಿವಮೊಗ್ಗ: ಜಿಲ್ಲೆಯಲ್ಲಿ ಹೊಸದಾಗಿ ವೃತ್ತಿಪರ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದೆ ಎಂದು ಟ್ರಸ್ಟಿನ ಮುಖ್ಯಸ್ಥೆ ಪ್ರೀತಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯ ರೋಷನ್ ಎಜುಕೇಶನಲ್ ಟ್ರಸ್ಟ್ ಡಿವಿಎಸ್ ಸಂಸ್ಥೆಯ ಸಹಯೋಗದೊಂದಿಗೆ ಹೊಸ ವೃತ್ತಿಪರ ಕೋರ್ಸ್ ಗಳನ್ನು ಆರಂಭಿಸುತ್ತಿದೆ. ಇದರ ಸೌಲಭ್ಯ ಪಡೆಯುವಂತೆ ಕೋರಿದರು.
ಯಾವ್ಯಾವ ಕೋರ್ಸ್ ಲಭ್ಯ
ಹಾಸ್ಪಿಟಾಲಿಟಿ, ಟೂರಿಸ್ಂ, ಏರೋಸ್ಟಸ್ ತರಬೇತಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ವೃತ್ತಿಪರ ಕೌಶಲ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದೆ.
ವೃತ್ತಿಪರ ಕೋರ್ಸ್ ಗಳ ಮೂಲಕ ಯುವಪೀಳಿಗೆಗೆ ಹೆಚ್ಚಿನ ಉದ್ಯೋಗ ಅವಕಾಶ ಲಭ್ಯವಾಗಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಕೋರ್ಸ್ ಗಳನ್ನು ಪರಿಚಯಿಸಲಾಗುತ್ತಿದೆ ಎಂದರು.
ಯಾರಿಗೆ ಪ್ರವೇಶ ಪಡೆಯಲು ಅವಕಾಶ
ಈಗಾಗಲೇ ಡಿಗ್ರಯಲ್ಲಿ ಅಭ್ಯಾಸ ಮಾಡುತ್ತಿರುವವರು ಹಾಗೂ ಪಿಯುಸಿ ತರಗತಿ ಪಾಸಾದವರು ಈ ಕೋರ್ಸ್ಗಳನ್ನು ಪಡೆಯಬಹುದು. ಈ ವೃತ್ತಿಪರ ಕೋರ್ಸ್ ಗಳಲ್ಲಿ ಉದ್ಯೋಗಗಳು ಲಭ್ಯ ಇವೆ. ದೇಶೀಯ ವಿಮಾನಯಾನ ಸಂಸ್ಥೆಯೊಂದಿಗೆ ಒಪ್ಪಂದದ ಕಾರ್ಯವು ನಡೆಯುತ್ತಿದೆ. ಈ ಅವಕಾಶವನ್ನು ಶಿವಮೊಗ್ಗ ಸುತ್ತಮುತ್ತಲ ಯುವಕ, ಯುವತಿಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗರ 8296315876 ಅಥವಾ 8792783464 ಗೆ ಸಂಪರ್ಕಿಸಬಹುದು. ಮಾಧ್ಯಮಗೋಷ್ಠಿಯಲ್ಲಿ ದೇಶೀಯ ವಿದ್ಯಾ ಶಾಲೆಯ ಕಾರ್ಯದರ್ಶಿ ಎಸ್.ರಾಜಶೇಖರ್, ಕ್ಯಾಪ್ಟನ್ ಸುಹೇಲ್ ಇದ್ದರು.
ಜೆ.ಎನ್.ಎನ್.ಸಿ ಕಾಲೇಜಿನಲ್ಲಿ ಈ ವರ್ಷದಿಂದಲೇ ಹೊಸ ಕೋರ್ಸ್ ಗಳ ಆರಂಭ, ಯಾವ ಕೋರ್ಸ್ ಲಭ್ಯ?