ಸುದ್ದಿ ಕಣಜ.ಕಾಂ | DISTRICT | RELIGOIUS
ಶಿವಮೊಗ್ಗ: ರಾಜ್ಯ ಸರ್ಕಾರವು ಅನಧಿಕೃತವಾಗಿ ನಿರ್ಮಾಣಗೊಂಡಿರುವ ಧಾರ್ಮಿಕ ಕಟ್ಟಡಗಳ ಮೇಲೆ ಚಾಟಿ ಬೀಸಿದೆ. ಶಿವಮೊಗ್ಗದಲ್ಲೂ ಜಿಲ್ಲಾಡಳಿತ ಇಂತಹ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
https://www.suddikanaja.com/2021/08/31/application-called-for-committe/
ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಸೇರಿ ಒಟ್ಟು 740 ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 202 ಧಾರ್ಮಿಕ ಕೇಂದ್ರಗಳ ಕಟ್ಟಡಗಳು ಸಾರ್ವಜನಿಕ ಸ್ಥಳ ಹಾಗೂ ಉದ್ಯಾನದಲ್ಲಿವೆ. ಅದೇ ರೀತಿ, 538 ಸರ್ಕಾರಿ ಭೂಮಿಯಲ್ಲಿವೆ.
ಕೆಲವು ಪ್ರಕರಣಗಳು ಇತ್ಯರ್ಥ
ಜಿಲ್ಲಾ ಮಟ್ಟದ ಸಮಿತಿಯು ಉದ್ಯಾನದಲ್ಲಿರುವ 385 ಧಾರ್ಮಿಕ ಕೇಂದ್ರಗಳ ಪ್ರಕರಣಗಳನ್ನು ಸುಖಾಂತ್ಯಗೊಳಿಸಿವೆ. 51ಕ್ಕೆ ಸಂಧಾನ ಮಾಡಿವೆ. 18 ಕಟ್ಟಡಗಳನ್ನು ತೆರವುಗೊಳಿಸಿವೆ. ಆದರೂ 186 ಧಾರ್ಮಿಕ ಕೇಂದ್ರಗಳ ಪರಿಶೀಲನೆ ನಡೆಯುತ್ತಿದೆ.
https://www.suddikanaja.com/2021/05/08/eviction-of-hotel-and-buildings-in-sigandur/
ಎಲ್ಲ ಧಾರ್ಮಿಕ ಕೇಂದ್ರಗಳು ಸದ್ಯಕ್ಕೆ ಸೇಫ್
ಮೈಸೂರಿನಲ್ಲಿ ಒಂದು ದೇವಸ್ಥಾನ ತೆರವುಗೊಳಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ಸರ್ಕಾರದ ಕ್ರಮವನ್ನು ಒಕ್ಕೊರಳಿನಿಂದ ವಿರೋಧಿಸಿದ್ದಾರೆ. ವಿರೋಧ ಪಕ್ಷದವರು ಇದನ್ನು ಖಂಡಿಸಿದ್ದಾರೆ. ಆಡಳಿತ ಪಕ್ಷ ಕೂಡ ಸರ್ಕಾರದ ನಿರ್ಧಾರ ಹಾಗೂ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದೆ. ಈ ಕಾರಣಕ್ಕಾಗಿ ಸರ್ಕಾರ ಆಪರೇಷನ್ ರಿಲಿಜಿಯಸ್ ಪ್ಲೇಸ್ ನಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಎಲ್ಲ ಧಾರ್ಮಿಕ ಕೇಂದ್ರಗಳ ಮೇಲೆ ಇದ್ದ ತೂಗುಗತ್ತಿ ದೂರ ಸರಿದಿದೆ.
https://www.suddikanaja.com/2021/03/23/criminal-case-for-violating-the-sand-guidelines/