ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜು ಆಗುವ ಎ.ಎಫ್. 3ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 18ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವ್ಯತ್ಯಯ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಪವರ್ ಕಟ್
ಎಸ್.ವಿ.ಬಡಾವಣೆ ಸಿ ಮತ್ತು ಡಿ ಬ್ಲಾಕ್, ಹನುಮಂತ ನಗರ, ಪಿ ಆ್ಯಂಡ್ ಟಿ ಕಾಲೊನಿ, ವೃದ್ಧಾಶ್ರಮ ಹಿಂಭಾಗ, ಜಡ್ಜ್ ಕ್ವಾರ್ಟರ್ಸ್, ಫಾರೆಸ್ಟ್ ಕ್ವಾರ್ಟರ್ಸ್, ಪಾಲಿಟೆಕ್ನಿಕ್ ಕಾಲೇಜು ಸುತ್ತಲಿನ ಪ್ರದೇಶ.