SIIMA AWARD 2021 | ಸೈಮಾ ವೇದಿಕೆಯಲ್ಲಿ‌ ಮಿಂಚಿದ ಕನ್ನಡದ ಸೆಲೆಬ್ರಿಟೀಸ್, ಯಾರ‌್ಯಾರಿಗೆ ಸಿಕ್ತು ಪ್ರಶಸ್ತಿ,‌ ಪಟ್ಟಿಗಾಗಿ ಕ್ಲಿಕ್ ಮಾಡಿ

 

 

ಸುದ್ದಿ‌ ಕಣಜ.ಕಾಂ | NATIONAL | ENTERTAINMENT
ಬೆಂಗಳೂರು: ಹೈದರಾಬಾದಿನಲ್ಲಿ ಶನಿವಾರ ರಾತ್ರಿ ನಡೆದ ಸೈಮಾ (South Indian International Movie Awards) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ‌ ಜರುಗಿದೆ. ದಕ್ಷಿಣ ಭಾರತದ ಪ್ರಸಿದ್ಧ ಚಿತ್ರ ನಟ ನಟಿಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.
2019ರಲ್ಲಿ ಬಿಡುಗಡೆಯಾದ ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ನಟ, ನಟಿಯರು ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಪ್ರಶಸ್ತಿ ಪಟ್ಟಿ ಘೋಷಣೆ ಆಗಿದ್ದೇ ವಿಜೇತರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರರಂಗದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

siima award in hyd
ಹೈದರಾಬಾದ್ ನಲ್ಲಿ ಶನಿವಾರ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರ ಖುಷಿಯದ್ದೊಂದು ಝಲಕ್.

ಚಂದನವನದಲ್ಲಿ‌ ಅರಳಿದ ಪ್ರಶಸ್ತಿ ಪುರಸ್ಕೃತರ‌ ಪಟ್ಟಿ

  • ಅತ್ಯುತ್ತಮ ನಟ ಕ್ರಿಟಿಕ್ಸ್​ ಪ್ರಶಸ್ತಿ​ | ರಕ್ಷಿತ್​ ಶೆಟ್ಟಿ- ಅವನೇ ಶ್ರೀಮನ್ನಾರಾಯಣ
  • ಅತ್ಯುತ್ತಮ ನಟಿ | ರಚಿತಾ ರಾಮ್​- ಆಯುಷ್ಮಾನ್​ ಭವ
  • ಅತ್ಯುತ್ತಮ ನಟಿ ಕ್ರಿಟಿಕ್ಸ್​ ಪ್ರಶಸ್ತಿ​ | ರಶ್ಮಿಕಾ ಮಂದಣ್ಣ- ಯಜಮಾನ
  • ಅತ್ಯುತ್ತಮ ಹೊಸ ನಟ | ಅಭಿಷೇಕ್​ ಅಂಬರೀಷ್​- ಅಮರ್​
  • ಅತ್ಯುತ್ತಮ ಪೋಷಕ ನಟಿ | ಕಾರುಣ್ಯ ರಾಮ್​- ಮನೆ ಮಾರಾಟಕ್ಕಿದೆ
  • ಅತ್ಯುತ್ತಮ ಚೊಚ್ಚಲ ನಿರ್ದೇಶನ | ಮಯೂರ ರಾಘವೇಂದ್ರ- ಕನ್ನಡ್​ ಗೊತ್ತಿಲ್ಲ
  • ಅತ್ಯುತ್ತಮ ಹಾಸ್ಯ ಕಲಾವಿದ | ಸಾಧು ಕೋಕಿಲ- ಯಜಮಾನ
  • ಅತ್ಯುತ್ತಮ ನಿರ್ದೇಶನ | ಹರಿಕೃಷ್ಣ, ಪೋನ್​ ಕುಮಾರ್​- ಯಜಮಾನ
  • ಅತ್ಯುತ್ತಮ ಖಳನಟ | ಸಾಯಿ ಕುಮಾರ್​- ಭರಾಟೆ
  • ಅತ್ಯುತ್ತಮ ಸಂಗೀತ ನಿರ್ದೇಶನ | ವಿ. ಹರಿಕೃಷ್ಣ,- ಯಜಮಾನ
  • ಅತ್ಯುತ್ತಮ ನೃತ್ಯ ನಿರ್ದೇಶನ | ಇಮ್ರಾನ್​ ಸರ್ದಾರಿಯಾ- ಅವನೇ ಶ್ರೀಮನ್ನಾರಾಯಣ
  • ಅತ್ಯುತ್ತಮ ಹಿನ್ನೆಲೆ ಗಾಯಕಿ | ಅನನ್ಯಾ ಭಟ್​- ಗೀತಾ ಕೇಳದೇ ಕೇಳದೇ
  • ಅತ್ಯುತ್ತಮ ಸಾಹಿತ್ಯ | ಪವನ್​ ಒಡೆಯರ್​- ನಟಸಾರ್ವಭೌಮ
  • ಅತ್ಯುತ್ತಮ ನಟ | ದರ್ಶನ್​, ಯಜಮಾನ

error: Content is protected !!