ಐಎಎಸ್, ಕೆಎಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಿಷ್ಯವೇತನ ಸಹಿತ ಉಚಿತ ತರಬೇತಿ, ಎಲ್ಲೆಲ್ಲಿ ತರಬೇತಿ, ಮಾಹಿತಿಗಾಗಿ ಕ್ಲಿಕ್‌ ಮಾಡಿ

 

ಸುದ್ದಿ ಕಣಜ.ಕಾಂ | KARNATAKA | EDUCATION
ಬೆಂಗಳೂರು: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಅದರ ಪ್ರಯೋಜನ ಪಡೆದುಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

READ | ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, ಎಷ್ಟು ಹುದ್ದೆ ಭರ್ತಿ, ಕೊನೆ ದಿನಾಂಕ‌, ಮಾಹಿತಿಗಾಗಿ ಕ್ಲಿಕ್ಕಿಸಿ

ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ನೀಡುತಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ‌ ಮಾಹಿತಿಗಾಗಿ  sw.kar.nic.in ವೆಬ್ ಜಾಲತಾಣಕ್ಕೆ ಸಂಪರ್ಕಿಸಬಹುದು.
ಯುಪಿಎಸ್‌.ಸಿಗೆ 9 ತಿಂಗಳು, ಕೆಎಎಸ್ 7 ತಿಂಗಳು,  ಬ್ಯಾಂಕಿಂಗ್ 3 ತಿಂಗಳು, ಎಸ್‌ಎಸ್‌ಸಿ 3 ತಿಂಗಳು, ಆರ್‌ಆರ್‌ಬಿ 3 ತಿಂಗಳು, ಗ್ರೂಪ್‌ ಸಿ ತರಬೇತಿಗೆ 3 ತಿಂಗಳ ಅವಧಿಯವರೆಗೆ ಕೋಚಿಂಗ್ ನೀಡಲಾಗುವುದು.

READ | ಬಂಗಾರ ಪ್ರಿಯರಿಗೆ ಶಾಕಿಂಗ್ ಸುದ್ದಿ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರವೆಷ್ಟು, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಯಾವುದಕ್ಕೆಲ್ಲ ತರಬೇತಿ?
ಐಎಎಸ್, ಕೆಎಎಸ್, ಬ್ಯಾಂಕಿಂಗ್, ಎಸ್‌.ಎಸ್‌.ಸಿ, ಆರ್.ಆರ್‌‌.ಬಿ, ಗ್ರೂಪ್ ಸಿ ಪರೀಕ್ಷೆಗಳಿಗೆ ತರಬೇತಿ‌ ನೀಡಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತರಬೇತಿ ಅವಧಿಯಲ್ಲಿ ನಗರಕ್ಕೆ ಅನುಗುಣವಾಗಿ ಶಿಷ್ಯವೇತನ ನೀಡಲಾಗುವುದು.
ಯಾವ ನಗರಗಳಿಗೆ ಎಷ್ಟು ಶಿಷ್ಯವೇತನ?
ಆಯ್ಕೆಯಾದ ಅಭ್ಯರ್ಥಿಗಳಿಗೆ ದೆಹಲಿಯಲ್ಲಿ ತರಬೇತಿ ಪಡೆದರೆ ಅವರಿಗೆ ₹10,000 ನೀಡಲಾಗುವುದು. ಹೈದರಾಬಾದ್ ಗೆ ₹8000, ಕರ್ನಾಟಕ ₹ 6000, ಚೆನ್ನೈನಲ್ಲಿ ತರಬೇತಿ ಪಡೆದರೆ ₹5000 ನೀಡಲಾಗುವುದು.