ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬೆಲೆಗೆ ಬಿದ್ದ ಅರಣ್ಯ ಅಧಿಕಾರಿ

 

 

ಸುದ್ದಿ‌ ಕಣಜ.ಕಾಂ | CITY | CRIME
ಶಿರಾಳಕೊಪ್ಪ: ಪ್ರಕರಣವೊಂದನ್ನು ಡೀಲ್ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಅರಣ್ಯ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶಿರಾಳಕೊಪ್ಪದ ಡಿಆರ್.ಎಫ್.ಒ‌ ವಿರೇಶ್ ಎಂಬುವವರೇ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವ ಅಧಿಕಾರಿ.
ಸೊರಬ ತಾಲೂಕಿನ ಇಂಡುವಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣ ಡೀಲ್ ಮಾಡುವುದಕ್ಕಾಗಿ ಹತ್ತು ಸಾವಿರ ರೂಪಾಯಿ ಲಂಚ ಕೇಳಿದ್ದ. ಶಿರಾಳಕೊಪ್ಪದ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಮುಂಗಡವಾಗಿ ಏಳು ಸಾವಿರ ರೂಪಾಯಿ ಪಡೆಯುವಾಗ ಎಸಿಬಿ ಬಲೆಗೆ ರೆಡ್ ಹ್ಯಾಮಡ್ ಆಗಿ ಬಿದ್ದಿದ್ದಾರೆ.

error: Content is protected !!