ಶಿವಮೊಗ್ಗದಲ್ಲಿ ಮುಂದುವರಿದ ಬೈಕ್ ಕಳ್ಳರ ಹಾವಳಿ

 

 

ಸುದ್ದಿ‌ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದಲ್ಲಿ ಬೈಕ್‌ ಕಳ್ಳರ ಹಾವಳಿ ಮುಂದುವರಿದಿದೆ. ಮನೆಯ ಮುಂದುಗಡೆ ರಾತ್ರಿ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳ್ಳತನ ಮಾಡಲಾಗಿದೆ.

READ | ಕಳೆದ ಒಂದು ವಾರದಿಂದ ಆಂಬ್ಯುಲೆನ್ಸ್ ನಾಪತ್ತೆ!

ನಗರದ ವಂದನಾ ಟಾಕೀಸ್ ಬಳಿಯ ಕುಂಬಾರ ಬೀದಿಯಲ್ಲಿ ರಾತ್ರಿ ವೇಳೆ ಗಣೇಶ್ ಶೇಟ್ ಎಂಬುವವರು ಬೈಕ್ ನಿಲ್ಲಿಸಿದ್ದು, ಬೆಳಗ್ಗೆ ಹೊತ್ತಿಗೆ ಕಳ್ಳತನ ಮಾಡಲಾಗಿದೆ‌. ವಾಹನ ಇಲ್ಲದಿರುವುದರಿಂದ ಗಾಬರಿಗೊಂಡ ಬೈಕ್ ಮಾಲೀಕರು ಅಕ್ಕ ಪಕ್ಕ ಕೂಡ ವಿಚಾರಿಸಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾಗಿಲ್ಲ. ಹೀಗಾಗಿ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

error: Content is protected !!