ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರ ಪರ ಅಧಿವೇಶನದಲ್ಲಿ ದನಿ ಎತ್ತುವ ಭರವಸೆ ನೀಡಿದ ಹರತಾಳು ಹಾಲಪ್ಪ

 

 

ಸುದ್ದಿ ಕಣಜ.ಕಾಂ‌| TALUK | POLITICS
ಸಾಗರ: ಅತಿವೃಷ್ಟಿಯಿಂದ‌ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರ ಪರ ದನಿ ಎತ್ತುವುದಾಗಿ ಶಾಸಕ ಹರತಾಳು ಹಾಲಪ್ಪ ಭರವಸೆ ನೀಡಿದರು.
ನಗರಸಭೆಯ ರಂಗಮಂದಿರದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಶನಿವಾರ ಚೆಕ್ ವಿತರಿಸಿ ಮಾತನಾಡಿದರು.

ಸಾಗರ ಜನತೆಗೆ ತೊಂದರೆ ಆಗುವುದನ್ನು ಸಹಿಸುವುದಿಲ್ಲ

‘ಸಾಗರದ ಜನತೆಗೆ ತೊಂದರೆ ಆಗುವುದನ್ನು ಯಾವುದೇ ಕಾರಣಕ್ಕೂ ನಾನು ಸಹಿಸುವುದಿಲ್ಲ. ಮಲೆನಾಡಿನಲ್ಲಿ‌ ಮಳೆ ಉತ್ತಮ ರೀತಿಯಲ್ಲಿ ಆಗಿದೆ. ಆದರೆ, ಸರಕಾರ ದಾಖಲೆಗಳಲ್ಲಿ ಬರಗಾಲವಿದೆ. ಇದಕ್ಕೆ ಕಾರಣ ಅಣೆಕಟ್ಟುಗಳು ತುಂಬದೇ ಇರುವುದು. ಆದರೆ, ಸರಕಾರದ ಪರಿಹಾರವನ್ನು ಕೊಡಿಸುವುದಾಗಿ ಹೇಳಿದರು.
ಸಾಗರದ ನಗರಸಭೆಯ ಸದಸ್ಯರು ನೊಂದವರಿಗೆ ಪರಿಹಾರ ನೀಡಲು ತೆಗೆದುಕೊಂಡ ನಿರ್ಧಾರಕ್ಕೆ ಶ್ಲಾಘನೀಯ ಎಂದರು.

READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಭಾರೀ‌ ಇಳಿಕೆ

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಈಗ 56 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಇನ್ನೂ ಹೆಚ್ಚಿನ ಪರಿಹಾರ ನೀಡುವ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಪೌರಾಯುಕ್ತ ಎಚ್.ಕೆ. ನಾಗಪ್ಪ ಸ್ವಾಗತಿಸಿದರು. ಸತೀಶ್ ಮೊಗವೀರ ನಿರೂಪಿಸಿದರು. ಗಣೇಶ್, ಪ್ರಸಾದ್ ವಂದಿಸಿದರು‌.

error: Content is protected !!