ಅಪರಾಧ ಚಟುವಟಿಕೆಯಲ್ಲಿ ಶೇ.90ರಷ್ಟು ಶಾಲೆ ಬಿಟ್ಟ ಮಕ್ಕಳು ಭಾಗಿ, ಕಳವಳ ತೋಡಿಕೊಂಡ ಎಸ್.ಪಿ ಲಕ್ಷ್ಮೀಪ್ರಸಾದ್

 

 

ಸುದ್ದಿ‌ ಕಣಜ.ಕಾಂ | DISTRICT | COTPA
ಶಿವಮೊಗ್ಗ: ಬಹುತೇಕ ಅಪರಾಧ ಪ್ರಕರಣಗಳ ಅಪರಾಧಿಗಳು ಮಾದಕ ವ್ಯಸನಿಗಳಾಗಿರುತ್ತಾರೆ. ವಾರ್ಷಿಕವಾಗಿ ಸರಾಸರಿ 5,500 ಅಪರಾಧ ಪ್ರಕರಣ ದಾಖಲಾಗುತ್ತಿದ್ದು, ಈ ಪೈಕಿ ಶೇ.90 ಅಪರಾಧಿಗಳು ಶಾಲೆ ಬಿಟ್ಟ ಮಕ್ಕಳಾಗಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಕಳವಳ ವ್ಯಕ್ತಪಡಿಸಿದರು.

https://www.suddikanaja.com/2021/03/27/case-against-shops-violation-of-cotpa-act/

ನಗರದ ಐಎಂಎ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ‌ ಅಡಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ 2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಿಗೆ ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಬೇಕು. ಶೈಕ್ಷಣಿಕವಾಗಿ ಮುಂದುವರೆಯುಂತೆ ಶಿಕ್ಷಕರು, ಮುಖ್ಯೋಪಾಧ್ಯಾಯರು ಕ್ರಮ ವಹಿಸಬೇಕು. ಶಾಲೆ ಸುತ್ತಮುತ್ತ ಮತ್ತು ಎಲ್ಲೆಡೆ ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು‌ ಸಲಹೆ ನೀಡಿದರು.
14 ರಿಂದ 18 ವಯಸ್ಸಿನಲ್ಲಿ ರೂಢಿಸಿಕೊಂಡ ಹವ್ಯಾಸಗಳೇ ಅವರ ಜೀವನದ ಪೂರ್ತಿ ಉಳಿಯುವ ಕಾರಣ ಹೆಚ್ಚು‌ ಮುತುವರ್ಜಿ ವಹಿಸಬೇಕು ಎಂದರು.

https://www.suddikanaja.com/2021/08/10/home-minister-aaraga-jnanendra-meeting-with-police-officials/

ಶೇ.17-20ರಷ್ಟು ಮಕ್ಕಳು ಚಟಕ್ಕೆ‌ ಬಲಿ
ಎನ್.ಟಿ.ಪಿ.ಸಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಪ್ರತಿ ವರ್ಷ ಶೇ.17 ರಿಂದ 20 ರಷ್ಟು ಹದಿವಯಸ್ಸಿನ ಮಕ್ಕಳು ತಂಬಾಕು ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು ಮುಖ್ಯವಾಗಿ ಶಾಲಾ ಕಾರ್ಯಕ್ರಮದಡಿ ಮಕ್ಕಳಿಗೆ ತಂಬಾಕಿನ ದುಷ್ಪರಿಣಾಮ ಕುರಿತು ಚಿತ್ರಕಲೆ, ಪ್ರಬಂಧ ಇತರೆ ಚಟುವಟಿಕೆ ಹಮ್ಮಿಕೊಂಡು ಪ್ರಶಸ್ತಿ, ಬಹುಮಾನ ನೀಡಲಾಗುತ್ತಿದೆ ಎಂದರು.
ಶಾಲೆಗಳ 100 ಗಜದೊಳಗೆ ಯಾವುದೇ ತಂಬಾಕು ಅಂಗಡಿ, ಕೇಂದ್ರಗಳು ಇರದಂತೆ, ತಂಬಾಕುಮುಕ್ತ ಶಾಲೆ ನಾಮಫಲಕ, ಸಾರ್ವಜನಿಕ ಧೂಮಪಾನ, ಪ್ರದರ್ಶನ ನಿಷೇಧ ಸೇರಿದಂತೆ ಕೋಟ್ಪಾ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2016 ನೇ ಸಾಲಿನಿಂದ ಈವರೆಗೆ 7,400 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹4,34,000 ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಮೆಗ್ಗಾನ್ ನಲ್ಲಿ ತಂಬಾಕು‌ ವ್ಯಸನ‌ ಮುಕ್ತ ಕೇಂದ್ರ
ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ತಂಬಾಕು ವಸ್ಯನ ಮುಕ್ತ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ತಂಬಾಕು ಗೀಳಿನಿಂದ ಬಿಡುಗಡೆ ಪಡೆಯಲು ಆಪ್ತ ಸಮಾಲೋಚನೆ, ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 8 ಸಾವಿರಕ್ಕೂ ಅಧಿಕ ಜನರು ಇದರ ಅನುಕೂಲ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಡಿಡಿಪಿಐ ಎನ್.ಎಂ. ರಮೇಶ್, ಡಿಎಚ್.ಒ ಡಾ.ರಾಜೇಶ್ ಸುರಗಿಹಳ್ಳಿ‌ ಉಪಸ್ಥಿತರಿದ್ದರು.

https://www.suddikanaja.com/2020/12/23/fake-cigarettes-in-shivamogga-karnataka/

error: Content is protected !!