ಹಾರನಹಳ್ಳಿ ಸಂತೆ ಮೈದಾನದಲ್ಲಿ ಪತ್ತೆಯಾಯ್ತು ಅನಾಥ ಶವ

 

 

ಸುದ್ದಿ ಕಣಜ.ಕಾಂ | TALUK | CRIME
ಶಿವಮೊಗ್ಗ: ತಾಲ್ಲೂಕಿನ ಹಾರನಹಳ್ಳಿ ಸಂತೆ ಮೈದಾನದ ಸಮೀಪ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತರ ವಯಸ್ಸು 50 ರಿಂದ 55 ವರ್ಷ ಇದೆ. ಶವವು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ಅಪರಿಚಿತ ವ್ಯಕ್ತಿಯು 5.4 ಅಡಿ ಎತ್ತರ ಇದ್ದು, ಬಿಳಿ ಮತ್ತು ಕಪ್ಪುಮಿಶ್ರಿತ ಗಡ್ಡ ಇದೆ. ತಲೆಯಲ್ಲಿ 2 ಇಂಚು ಉದ್ದನೆಯ ಕಪ್ಪು ಮಿಶ್ರತ ಬಿಳಿ ಕೂದಲಿದ್ದು, ನೀಲಿ ಬಣ್ಣದ ಬಿಳಿ ಗೆರೆಯಿರುವ ತುಂಬು ತೋಳಿನ ಶರ್ಟ್ ಧರಿಸಿರುತ್ತಾರೆ. ಒಂದು ಸಿಮೆಂಟ್ ಮಿಶ್ರಿತ ಕೆಂಪು ಬಣ್ಣದ ಹೊದಿಕೆ ಇದೆ. ವಾರಸುದಾರರು ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

error: Content is protected !!