ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸೇರಿದ ಕಾಲೇಜಿನ ನಾಲ್ಕು ಬಸ್‍ಗಳಿಂದ 55 ಸಾವಿರ ಮೌಲ್ಯದ ಡೀಸೆಲ್ ಕಳವು!

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಸೋಮಿನಕೊಪ್ಪದ ಮೈತ್ರಿ ಅಪಾರ್ಟ್‍ಮೆಂಟ್ ಸಮೀಪವೇ ಇರುವ ಪೆಸಿಟ್ ಕಾಲೇಜಿಗೆ ಸೇರಿದ ನಾಲ್ಕು ಬಸ್ ಗಳಿಂದ ಅಂದಾಜು 55 ಸಾವಿರ ರೂಪಾಯಿ ಮೌಲ್ಯದ ಡೀಸೆಲ್ ಕಳ್ಳತನ ಮಾಡಲಾಗಿದೆ.

pesitಮಾಜಿ ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಮಾಲೀಕತ್ವಕ್ಕೆ ಸೇರಿರುವ ಈ ಕಾಲೇಜಿನಲ್ಲಿ ಆಗಸ್ಟ್ 26ರ ರಾತ್ರಿ ಭಾರಿ ಪ್ರಮಾಣದ ಡೀಸೆಲ್ ಕಳ್ಳತನ ಮಾಡಲಾಗಿದೆ.
ಸೆಕ್ಯೂರಿಟಿ ಗಾರ್ಡ್ ಇದ್ದರೂ ಕಳ್ಳತನ
ಎರಡು ಮಿನಿ ಬಸ್ ಹಾಗೂ ಎರಡು ದೊಡ್ಡ ಬಸ್ಸುಗಳಿಂದ 580 ಲೀಟರಿಗೂ ಅಧಿಕ ಡೀಸೆಲ್ ಕಳ್ಳತನ ಮಾಡಲಾಗಿದೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಕೂಡ ಕರ್ತವ್ಯದಲ್ಲಿದ್ದರು. ಆದರೂ ಕಳ್ಳತನ ಮಾಡಲಾಗಿದೆ.

ದೂರಿನಲ್ಲಿ ತಿಳಿಸಿರುವಂತೆ, ಎರಡು ಬಸ್ಸುಗಳಲ್ಲಿ ತಲಾ 90 ಲೀಟರ್, ಒಂದು ಬಸ್ಸಿನಲ್ಲಿ 250 ಲೀಟರ್, ಮತ್ತೊಂದರಲ್ಲಿ 150 ಲೀಟರ್ ಡೀಸೆಲ್ ಇತ್ತೆಂದು ಹೇಳಲಾಗಿದೆ. ವಿನೋಬ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!