EDIBLE OIL PRICE | ಅಡುಗೆ ಎಣ್ಣೆ ಬೆಲೆ ಲೀಟರ್ ₹3-4 ಇಳಿಕೆ ಸಾಧ್ಯತೆ, ಕಾರಣವೇನು?

 

 

ಸುದ್ದಿ ಕಣಜ.ಕಾಂ | NATIONAL | COMMERCE
ನವದೆಹಲಿ: ನಿರಂತರ ಮೇಲ್ಮುಖವಾಗಿ ಸಾಗಿದ್ದ ಅಡುಗೆ ಎಣ್ಣೆಗೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆ ಇದೆ.‌ ಇದಕ್ಕೆ ಕಾರಣ, ಕೇಂದ್ರ ಸರ್ಕಾರ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ತೈಲದ ಮೇಲೆ ಸುಂಕ ಇಳಿಕೆ‌ ಮಾಡಿರುವುದು.
₹100 ಇದ್ದ ತೈಲ ಬೆಲೆ ಹೆಚ್ಚುತ್ತಾ ಸಾಗಿ ₹200ಕ್ಕೆ ತಲುಪಿದೆ. ಇದರಿಂದ ಜನ ಕಂಗಾಲಾಗಿದ್ದಾರೆ. ಈಗ ಸ್ವಲ್ಪ ಪ್ರಮಾಣದಲ್ಲಿ ತೈಲದ ಬೆಲೆ ಇಳಿಕೆ ಆಗುವ ಸಾಧ್ಯತೆ ಇದ್ದು, ಬರುವ ಹರಿದಿನಗಳಿಗೆ ಅನುಕೂಲವಾಗಲಿದೆ.
ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು‌ ಶೇ.10 ರಿಂದ ಶೇ.2.5ಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ, ಕಚ್ಚಾ ಸೂರ್ಯಕಾಂತಿ ಹಾಗೂ ಸೋಯಾ ಸುಂಕವನ್ನು ಶೇ.7.5 ರಿಂದ ಶೇ.2.5ಗೆ ಇಳಿಕೆ ಮಾಡಲಾಗಿದೆ. ಈ‌ ಕಾರಣಕ್ಕಾಗಿ, ಈಗಿರುವ ತೈಲ ದರದಲ್ಲಿ ಶೇ.24.75ಕ್ಕೆ ಇಳಿಕೆ ಆಗಲಿದೆ. ಎಲ್ಲವುಗಳ ಬೆಲೆಯು ಏರುಗತಿಯಲ್ಲೇ ಸಾಗುತ್ತಿರುವಾಗ ತೈಲ ಬೆಲೆಯ ಸುಂಕ ಇಳಿಕೆಯಿಂದ ಸ್ವಲ್ಪ ಅನುಕೂಲ ಆಗಲಿದೆ.

error: Content is protected !!