ಶಿವಮೊಗ್ಗದಲ್ಲಿ ನಡೆಯಲಿದೆ ಅಪ್ಪಟ ಭಾರತೀಯ ಶೈಲಿಯ ಫ್ಯಾಷನ್ ಶೋ, ಸ್ಪರ್ಧೆಯಲ್ಲಿ ಯಾರೆಲ್ಲ ಭಾಗವಹಿಸಬಹುದು?

 

 

ಸುದ್ದಿ ಕಣಜ.ಕಾಂ | DISTRICT | FASHION SHOW
ಶಿವಮೊಗ್ಗ: ಇದೇ ಮೊದಲ ಸಲ ಶಿವಮೊಗ್ಗದಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ ಎಂದು ಎಲೈಟ್ ಸ್ಟಾರ್ ಈವೆಂಟ್ಸ್‌ನ ಮುಖ್ಯಸ್ಥೆ ಗುಣಲಕ್ಷ್ಮೀ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್ ನಲ್ಲಿ ಶೋ‌ ನಡೆಯಲಿದೆ.‌ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸುವಂತೆ ಕೋರಿದರು.
ಬೆಂಗಳೂರಿನಲ್ಲಿ ಸಾಕಷ್ಟು ಫ್ಯಾಷನ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಇದು ಪ್ರಥಮ‌ ಶೋ‌ ಆಗಿದೆ. ಈಗಾಗಲೇ ನೋಂದಣಿ ಆರಂಭವಾಗಿದೆ ಎಂದರು.
ಯಾರೆಲ್ಲ ಭಾಗವಹಿಸಬಹುದು?
ಮಕ್ಕಳು, ಗೃಹಿಣಿಯರು, ಪುರುಷರು, ಯುವತಿಯರು ಹೀಗೆ ಐದು ವಿಭಾಗಗಳಿವೆ. 8ರಿಂದ 45 ವರ್ಷದೊಳಗಿನವರು ಇದರಲ್ಲಿ ಭಾಗವಹಿಸಬಹುದಾಗಿದೆ.‌ ವಿಶೇಷವೆಂದರೆ, ಶಿವಮೊಗ್ಗದಲ್ಲೇ ಆಡಿಷನ್ ನಡೆಯಲಿದೆ.
ಬರುವ ಆದಾಯ ಅನಾಥಾಶ್ರಮಕ್ಕೆ ಅರ್ಪಣೆ
ಶೋ ಉದ್ದೇಶ ಬರೀ‌ ಮನೋರಂಜನೆ ಅಷ್ಟೇ ಅಲ್ಲ. ಅಪ್ಪಟ ಭಾರತೀಯ ಶೈಲಿಯಲ್ಲಿ ‌ನಡೆಯಲಿರುವ ಶೋದಿಂದ ಬರುವ ಆದಾಯವನ್ನು ಅನಾಥಾಶ್ರಮಕ್ಕೆ ನೀಡಲಾಗುವುದು ಎಂದು ಹೇಳಿದರು.
ನೋಂದಣಿಗಾಗಿ 6366219192ಗೆ ಸಂಪರ್ಕಿಸಬಹುದಾಗಿದೆ. ನಂದನ್‌ ಕುಮಾರ್, ಕಾರ್ತಿಕ್, ಪೊಂಪಿ ಕುಮಾರ್ ಉಪಸ್ಥಿತರಿದ್ದರು.

error: Content is protected !!