ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಜಾಗ ಒತ್ತುವರಿ ತಡೆಗೆ ಹೈಕೋರ್ಟ್ ಖಡಕ್ ವಾರ್ನಿಂಗ್, ಕಾರಣವೇನು ಗೊತ್ತಾ?

 

 

ಸುದ್ದಿ‌ ಕಣಜ.ಕಾಂ | KARNATAKA | HIGH COURT
ಬೆಂಗಳೂರು: ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಾಗ ಒತ್ತುವರಿ ತಡೆಗೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ.

Courtಹಂಗಾಮಿ ನ್ಯಾಯಮೂರ್ತಿ ಎಸ್.ಸಿ.ಶರ್ಮಾ ನೇತೃತ್ವದ ವಿಭಾಗೀಯ ಪೀಠವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಶಿವಮೊಗ್ಗದ ಜಯನಗರ ನಿವಾಸಿ ಜಿ.ರಾಮು ಹಾಗೂ ವಿನೋಬನಗರ ನಿವಾಸಿ ಮೋಹನ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯು ಪೀಠದ ಎದುರು ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪದ ವಕೀಲ ಪ್ರಿನ್ಸ್ ಐಸಾಕ್ ಅವರು ವಾದಿಸಿದರು.

READ | ಸಣ್ಣಪುಟ್ಟ ರೌಡಿಗಳಿಗೆ ಬಿಗ್ ರಿಲೀಫ್, ಜಾನುವಾರು ಸಾಗಣೆಗೆ ಬ್ರೇಕ್, ಹಿರಿಯ ಪೊಲೀಸ್ ಅಧಿಕಾರಿಗಳ‌ ಸಮಾವೇಶದಲ್ಲಿ‌ ಇನ್ನಷ್ಟು ಪ್ರಮುಖ ನಿರ್ಧಾರ

ಅರ್ಜಿದಾರರ ಆರೋಪಗಳೇನು?
ಮೈಸೂರು ಮಹಾರಾಜರ ಕಾಲದಲ್ಲಿ ಸರ್ಕಾರಿ‌ ಆಸ್ಪತ್ರೆಗೆ ಜಾಗ ನೀಡಲಾಗಿದೆ. ಬ್ರಿಟಿಷ್ ಕಾಲದಲ್ಲಿ ಆಸ್ಪತ್ರೆ ನಿರ್ಮಿಸಿದ್ದು, ಪ್ರಸಕ್ತ ಖಾಸಗಿಯವರು ಜಾಗ ಒತ್ತುವರಿ‌ ಮಾಡುತಿದ್ದಾರೆ ಎಂದು ಆರೋಪಿ‌ ಪಿಐಎಲ್ ಸಲ್ಲಿಸಿದ್ದರು. ಅದರ ತೆರವಿಗೆ ಸರ್ಕಾರಕ್ಕೆ ಸೂಚಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಮೆಗ್ಗಾನ್ ಆಸ್ಪತ್ರೆ ಸುತ್ತ 172 ಎಕರೆ ಜಾಗವಿದ್ದು, ಅದರಲ್ಲಿ 72 ಎಕರೆ ಮೈಸೂರು ಮಹಾರಾಜರು ಬಳುವಳಿಯಾಗಿ ನೀಡಿದ್ದರು. ಸದ್ಯ 136 ಎಕರೆ ಖಾಸಗಿಯವರಿಂದ ಒತ್ತುವರಿ ಮಾಡಿದ್ದು, ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.

https://www.suddikanaja.com/2021/05/08/eviction-of-hotel-and-buildings-in-sigandur/

error: Content is protected !!