ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಭಾರತ ಎಲೆಕ್ಟ್ರಾನ್ಸಿಕ್ಸ್ ಲಿಮಿಟೆಡ್(ಬಿಇಎಲ್)ನಲ್ಲಿ ಗುತ್ತಿಗೆ ಆಧಾರದ ಮೇಲೆ ಏಳು ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿ ನಡೆಯಲಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್/ ಇ ಆಂಡ್ ಟಿ/ ಟೆಲಿಕಮ್ಯೂನಿಕೇಷನ್ ವಿಷಯದಲ್ಲಿ ಬಿಇ/ ಬಿಟೆಕ್ ನಲ್ಲಿ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸಾಮಾನ್ಯ ವರ್ಗಕ್ಕೆ 5, ಎಸ್ಟಿ 1 ಮತ್ತು ಇಡಬ್ಲ್ಯುಎಸ್ 1 ಸೇರಿ ಒಟ್ಟು 7 ಹುದ್ದೆಗಳ ನೇಮಕಾತಿ ನಡೆಯಲಿದೆ. ಮೊದಲನೇ ವರ್ಷ 35,000 ರೂಪಾಯಿ, 2ನೇ ವರ್ಷ 40,000 ರೂ., 3ನೇ ವರ್ಷ 45,000 ರೂ. ಹಾಗೂ 4ನೇ ವರ್ಷ 50,000 ರೂ. ಸಂಭಾವನೆ ನೀಡಲಾಗುವುದು.
ಸಂಬಂಧಪಟ್ಟ ಕ್ಷೇತ್ರದಲ್ಲಿ ಅಭ್ಯರ್ಥಿಯು ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು, ಎಲೆಕ್ಟ್ರಾನಿಕ್ಸ್ ಅಭ್ಯರ್ಥಿಗಳು ಕನಿಷ್ಠ 6 ತಿಂಗಳು ಸರ್ವಿಲೆನ್ಸ್, ಇನ್ಫಾರ್ಮೆಷನ್ ಟೆಕ್ನಾಲಜಿ, ನೆಟ್ವರ್ಕ್ ಪ್ರಾಜೆಕ್ಟ್ ಕ್ಷೇತ್ರದಲ್ಲಿ ಕಾರ್ಯ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 8 ಅಂತಿಮ ದಿನಾಂಕವಾಗಿರುತ್ತದೆ.
ನೇಮಕಾತಿ ಪ್ರಕ್ರಿಯೆ
ಪದವಿಯಲ್ಲಿ ಪಡೆದ ಅಂಕದ ಆಧಾರದ ಮೇಲೆ ಶೇ.75 ಅಂಕ ನೀಡಲಾಗುವುದು. ನಂತರ, ಅನುಭವಕ್ಕೆ ಶೇ.10 ಹಾಗೂ ಸಂದರ್ಶನಕ್ಕೆ ಶೇ.15 ಅಂಕ ನೀಡಲಾಗುವುದು. ಅರ್ಜಿ ಶುಲ್ಕ ಇತ್ಯಾದಿ ಸಮಸ್ಯೆಯಾದ್ದಲ್ಲಿ ದೂರವಾಣಿ ಸಂಖ್ಯೆ (080-22195466 ) ಹಾಗೂ ತಾಂತ್ರಿಕ ಸಹಾಯಕ್ಕೆ 8866678549/ 8866678559 ಕರೆ ಮಾಡಬಹುದು.
https://www.suddikanaja.com/2021/09/26/hescom-job-recruitment/