JOBS IN BMRCL | ಮೆಟ್ರೋದಲ್ಲಿ‌ ಉದ್ಯೋಗ ಅವಕಾಶ

 

 

ಸುದ್ದಿ‌ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಮಂಡಳಿ (BMRCL)ನಲ್ಲಿ ಉದ್ಯೋಗ ಅವಕಾಶವಿದೆ.
ಡೆಪ್ಯೂಟಿ ಜನರಲ್​ ಮ್ಯಾನೇಜರ್, ಅಸಿಸ್ಟಂಟ್​ ಜನರಲ್​ ಮ್ಯಾನೇಜರ್​ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೇಮಕಾತಿ ವೇಳೆಯೇ ಒಪ್ಪಂದ ಮತ್ತು ಡೆಪ್ಯೂಟೇಶನ್​ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 27 ಅಂತಿಮ ದಿನವಾಗಿದೆ. ಕಾಮರ್ಸ್​ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.

READ | ಬಿಇಎಲ್‍ನಲ್ಲಿ ಭರಪೂರ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಕ್ಲಿಕ್ಕಿಸಿ

ಒಟ್ಟು ಮೂರು ಹುದ್ದೆಗಳಿಗೆ ಅರ್ಜಿಗಳನ್ನು‌ ಕರೆಯಲಾಗಿದೆ. 2 ಡೆಪ್ಯೂಟಿ ಜನರಲ್​ ಮ್ಯಾನೇಜರ್, 1 ಅಸಿಸ್ಟಂಟ್​ ಜನರಲ್​ ಮ್ಯಾನೇಜರ್ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿಯನ್ನು ಬೆಂಗಳೂರು ಮೆಟ್ರೋ ರೈಲು, ಕಾರ್ಪೊರೇಷನ್ ಲಿಮಿಟೆಡ್, ಮೂರನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಎಚ್. ರಸ್ತೆ, ಶಾಂತಿನಗರ,
ಬೆಂಗಳೂರು 560 027 ಇಲ್ಲಿಗೆ ಸಲ್ಲಿಸಬಹುದು.
ಗಮನಕ್ಕೆ | ವಯೋಮಿತಿ, ಶುಲ್ಕ, ಅರ್ಜಿ ಸಲ್ಲಿಕೆ, ಹುದ್ದೆಗೆ ಅಗತ್ಯವಿರುವ ಅನುಭವ ಇತ್ಯಾದಿಗಳ‌ ಬಗ್ಗೆ ಮಾಹಿತಿಗಾಗಿ ನೋಟಿಫಿಕೇಷನ್ ಓದಿ.

NOTIFICATION

WEBSITE

https://www.suddikanaja.com/2021/09/26/hescom-job-recruitment/

error: Content is protected !!