ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಓಸಿಎಲ್)ನಲ್ಲಿ ವಿವಿಧ 513 ಹುದ್ದೆಗಳ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 12 ಅಂತಿಮ ದಿನವಾಗಿದ್ದು, ಅರ್ಹರು ಹಾಗೂ ಭಾರತದಲ್ಲಿ ಯಾವ ರಾಜ್ಯದಲ್ಲಿ ಬೇಕಾದರೂ ಕೆಲಸ ಮಾಡಲು ಇಚ್ಛಿಸುವವರು ಅರ್ಜಿಗಳನ್ನು ಸಲ್ಲಿಬಹುದಾಗಿದೆ. ಹುದ್ದೆಗೆ ಅನುಗುಣವಾಗಿ ವೇತನವು (₹25,000 ದಿಂದ ₹1,0,5000) ಇರಲಿದೆ. ಅಕ್ಟೋಬರ್ 24ರಂದು ಲಿಖಿತ ಪರೀಕ್ಷೆ ನಡೆಯಲಿವೆ. ನವೆಂಬರ್ 11ರಂದು ಫಲಿತಾಂಶ ಹೊರಬೀಳಲಿವೆ.
READ | ಪಿಯುಸಿ ಪೂರ್ಣಗೊಳಿಸಿದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಸಲ್ಲಿಕೆಗೆ ಇನ್ನೆರಡು ದಿನವಷ್ಟೇ ಬಾಕಿ
ಎಸ್ಸೆಸ್ಸೆಲ್ಸಿ, ಡಿಪ್ಲೋಮಾ ಹಾಗೂ ಪದವಿಯಲ್ಲಿ ವಿಜ್ಞಾನ ವಿಷಯದಲ್ಲಿ ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಕನಿಷ್ಠ 18ರಿಂದ ಗರಿಷ್ಠ 26 ವರ್ಷದವರಿಗೆ ವಯೋಮಿತಿ ಹೊಂದಿರಬೇಕು.
ಯಾವ ಹುದ್ದೆಗಳ ಭರ್ತಿ?
ಜ್ಯೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್-4 (ಪ್ರೊಡಕ್ಷನ್), ಜ್ಯೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್-4(ಪಿ ಆ್ಯಂಡ್ ಯು), ಜ್ಯೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್(ಎಲೆಕ್ಟ್ರಿಕಲ್)/ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-4, ಜ್ಯೂನಿಯರ್ ಜ್ಯೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್-4(ಪಿ ಆ್ಯಂಡ್ ಯು, ಒ ಆ್ಯಂಡ್ ಎಂ), ಜ್ಯೂನಿಯರ್ ಜ್ಯೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್-4(ಮೆಕ್ಯಾನಿಕಲ್), ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-4,ಜ್ಯೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್-4(ಇನ್ ಸ್ಟ್ರುಮೆಂಟೇಶನ್), ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-4,ಜೂನಿಯರ್ ಕ್ವಾಲಿಟಿ ಕಂಟ್ರೋಲರ್ ಅಸಿಸ್ಟೆಂಟ್-4, ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-4(ಫೈಯರ್ ಆ್ಯಂಡ್ ಸೇಫ್ಟಿ), ಜ್ಯೂನಿಯರ್ ಮೆಟೇರಿಯಲ್ ಅಸಿಸ್ಟೆಂಟ್-4, ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-4,ಜ್ಯೂನಿಯರ್ ನರ್ಸಿಂಗ್ ಅಸಿಸ್ಟೆಂಟ್-4.
ಮಾಹಿತಿಗಾಗಿ ವೆಬ್ಸೈಟ್ http://iocl.com/ ಲಿಂಕ್ ಮೇಲೆ ಕ್ಲಿಕ್ ಮಾಡಿ