JOBS IN RDPR | ಡಿಗ್ರಿ, ಬಿಇ ವಿದ್ಯಾರ್ಹತೆ ಇರುವವರಿಗೆ ಇಲ್ಲಿದೆ‌ ಸುವರ್ಣ ಅವಕಾಶ, ಎಷ್ಟು ಹುದ್ದೆ, ಅರ್ಜಿ ಸಲ್ಲಿಕೆ ಹೇಗೆ?

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಜಲ‌ ಜೀವನ್ ಮಿಷನ್ ಮತ್ತು ಸ್ವಚ್ಚ ಭಾರತ್ ಮಿಷನ್ ಯೋಜನೆ ಅಡಿ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ‌ ಮಾಡಿಕೊಳ್ಳಲಾಗುವುದು. ನಂತರ, ಅಗತ್ಯತೆ ಮನಗಂಡು ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

READ | ಭದ್ರಾವತಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕರ ಹುದ್ದೆಗಳ ತಾತ್ಕಾಲಿಕ ಪಟ್ಟಿ ಪ್ರಕಟ, ಆಕ್ಷೇಪಣೆಗೆ ಅವಕಾಶ

ಅರ್ಜಿ ಎಲ್ಲಿ ಲಭ್ಯ, ಏನೇನು ದಾಖಲೆ ಅಗತ್ಯ?
ಆಸಕ್ತರು ಸಂಬಂಧಪಟ್ಟ ಹುದ್ದೆಗಳಿಗಾಗಿ https://rdpr.karnataka.gov.in/, https://swachhamevajayate.org/ ಅಂತರ್ಜಾಲ ತಾಣಗಳಲ್ಲಿ‌ ಪಡೆಯಬಹುದಾಗಿದೆ. ಬಳಿಕ ಅರ್ಜಿಗಳನ್ನು ಭರ್ತಿ ಮಾಡಿ ವಯಸ್ಸು ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು, ರೆಸ್ಯೂಮ್‌ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ಯಾವ ಹುದ್ದೆಗೆ ಸೂಕ್ತರೆಂಬ ಬಗ್ಗೆ ಟಿಪ್ಪಣಿ ಬರೆದು ಅರ್ಜಿಯೊಂದಿಗೆ ಸಲ್ಲಿಸಲು‌ ಸೂಚಿಸಲಾಗಿದೆ.
ಅರ್ಜಿಯನ್ನು ಸೆಪ್ಟೆಂಬರ್ 27ರ ಸಂಜೆ 5.30ರೊಳಗೆ “ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎರೆನೇ ಮಹಡಿ, ಕೆ.ಎಚ್‌.ಬಿ ಕಟ್ಟಡ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು 5600009” ಇಲ್ಲಿಗೆ ಸಲ್ಲಿಸಬೇಕು.

READ | ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ‌ ನೀಡಿದ ‘ಕೂ’, ಏನದು?

ಯಾವ್ಯಾವ ಹುದ್ದೆಗಳಿಗೆ ಭರ್ತಿ?
ಜ್ಯೂನಿಯರ್ ಕನ್ಸಲ್ಟೆಂಟ್, ಯೋಜನಾ ವ್ಯವಸ್ಥಾಪಕರು, ಮೇಲ್ವಿಚಾರಣೆ ಮೌಲ್ಯಮಾಪನ ತಜ್ಞರು, ಸ್ಯಾನಿಟೈಸೇಷನ್ ಹೈಜಿನ್ ಪ್ರಮೋಷನ್ ಕನ್ಸಲ್ಟೆಂಟ್, ಎಂಎಚ್.ಎಂ ಕನ್ಸಲ್ಟೆಂಟ್ ಗಳಿಗೆ ತಲಾ ಒಂದು ಹುದ್ದೆಗಳಿವೆ. ಘನ, ದ್ರವ ತ್ಯಾಜ್ಯ ನಿರ್ವಹಣೆ ಸಮಾಲೋಚಕರು ಐದು ಹುದ್ದೆಗಳಿವೆ. ಈ ಹುದ್ದೆಗಳಿಗೆ ನೇಮಕಗೊಳ್ಳುವವರು ಬೆಂಗಳೂರು ಕೇಂದ್ರ ಕಚೇರಿಯಲ್ಲಿ‌ ಕೆಲಸ‌ ಮಾಡುತ್ತದೆ.
ಜಲ ಜೀವನ್ ಮಿಷನ್ ಯೋಜನೆ ಅಡಿ ಜಿಲ್ಲಾ ಯೋಜನಾ ವ್ಯವಸ್ಥಾಪಕರು 4, ಎಂಐಎಸ್ ಸಮಾಲೋಚಕರು, ನೈರ್ಮಲ್ಯ ಶುಚಿತ್ಚ ಸಮಾಲೋಚಕರು ತಲಾ 2, ಮಾಹಿತಿ ಶಿಕ್ಷಣ ಮತ್ತು ಸಂವಹನಕಾರರು 1,ಘನ, ದ್ರವ ತ್ಯಾಜ್ಯ ನಿರ್ವಹಣೆ ಸಮಾಲೋಚಕರು 4 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

https://www.suddikanaja.com/2021/09/16/jobs-in-high-court-for-degree-holders/

error: Content is protected !!