ಮಂಡಗದ್ದೆಯಲ್ಲಿ ನವಜಾತ ಶಿಶುವಿನ ಶವ ಪತ್ತೆ

 

 

ಸುದ್ದಿ ಕಣಜ.ಕಾಂ | TALUK | CRIME
ತೀರ್ಥಹಳ್ಳಿ: ತಾಲೂಕಿನ ಮಂಡಗದ್ದೆಯ ಕೆರೆ ದಂಡೆಯಲ್ಲಿ ಗಂಡು ನವಜಾತ ಶಿಶುವಿನ ಶವ ಪತ್ತೆಯಾಗಿದೆ.
ಕೆರೆ ದಂಡೆಯಲ್ಲಿದ್ದ ಮಗುವಿಗೆ ಆರಂಭದಲ್ಲಿ ಜೀವವಿತ್ತು. ಮಗು ಬೆಸ್ತರ ಕಣ್ಣಿಗೆ ಬಿದ್ದಿದ್ದೇ ಅವರು ಗ್ರಾಮಸ್ಥರನೆಲ್ಲ ಕರೆದಿದ್ದಾರೆ. ಸ್ವಲ್ಪ ಹೊತ್ತಿಗೆ ಶಿಶು ಅಸುನೀಗಿದೆ. ತೀರ್ಥಹಳ್ಳಿಯ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಮಗುವಿನ ಇಡಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!