ಮಕ್ಕಳೊಂದಿಗೆ ದಾರಿ ದಾಟಬೇಕಾದರೆ ಹುಷಾರ್, ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ವ್ಯಕ್ತಿ ಸಾವು

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಪಾಸ್‌ ರಸ್ತೆ ಟೊಯೋಟಾ ಶೋ ರೂಂ ಹತ್ತಿರ ಎನ್ ಫೀಲ್ಡ್ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ನಂಜಪ್ಪ ಲೇಔಟ್ ನಿವಾಸಿ ಡಿ.ರಾಜೀವ್(38) ಮೃತ ವ್ಯಕ್ತಿ. ಬೈಕ್‌ ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುವಾಗ ರಾಜೀವ್‌ ಹಾಗೂ ಅವರ ಮಗನಿಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ರಾಜೀವ್ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದ ಆರು ವರ್ಷದ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೈಕ್ ಅಲ್ಲೇ ಬಿಟ್ಟು ಪರಾರಿ
ಎನ್ ಫೀಲ್ಡ್ ನಿಂದ ಡಿಕ್ಕಿ ಹೊಡೆದು ಬೈಕ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!