ಪೋಷಕರೇ ಹುಷಾರ್! ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಉಲ್ಬಣ, ಯಾವ್ಯಾವ ಜಿಲ್ಲೆಗಳಲ್ಲಿ ಹೆಚ್ಚು ಕೇಸ್?

 

 

ಸುದ್ದಿ ಕಣಜ.ಕಾಂ
ಕೋಲಾರ/ಬೆಂಗಳೂರು/ಕೊಪ್ಪಳ: ಕೋವಿಡ್ ಎರಡನೇ ಅಲೆ ಇಳಿಮುಖವಾಗಿದ್ದು, ಜನ ನೆಮ್ಮದಿಯಲ್ಲಿದ್ದಾರೆ. ಆದರೆ, ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮಕ್ಕಳಲ್ಲಿವೈರಲ್ ಇನ್ಫೆಕ್ಷನ್ ಕಾಣಿಸಿಕೊಳ್ಳಲಾರಂಭಿಸಿದೆ.
ಕೋಲಾರ ಜಿಲ್ಲೆಯೊಂದರಲ್ಲೇ 90ಕ್ಕೂ ಅಧಿಕ ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಂಡಿದೆ. ಜ್ವರದೊಂದಿಗೆ ಶೀತ ಹಾಗೂ ಕೆಮ್ಮು ಕೂಡ ಇದೆ.
ಚಿತ್ರದುರ್ಗ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಕರಣಗಳು ಕಂಡುಬರುತ್ತಿವೆ.

READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಭಾರೀ‌ ಇಳಿಕೆ

ವೈರಲ್ ಫೀವರ್ ಬಗ್ಗೆ ಸಚಿವರೇನು ಹೇಳಿದರು?
ಕೊಪ್ಪಳದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಮಾತನಾಡಿದ್ದು, ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತಿದೆ. ಆದರೆ, ಇದು ಕೊರೊನಾ ಮುನ್ಸೂಚನೆ ಅಲ್ಲ. ಪ್ರಸ್ತುತ ಕೊರೊನಾ ಪಾಸಿಟಿವಿ ದರ ಇಳಿಕೆಯಾಗಿದೆ. ಹೀಗಾಗಿ, ಇವೆರಡಕ್ಕೂ ಸಂಬಂಧ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ಮಕ್ಕಳಿಗೆ ಕೆಮ್ಮು, ಶೀತ, ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ, ಕೆಲವು ಜಿಲ್ಲೆಗಳಲ್ಲಿ ಮಕ್ಕಳ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂದು ಹೇಳಿದರು.

https://www.suddikanaja.com/2021/09/15/usain-bolt-coming-to-chikkamagaluru/

error: Content is protected !!