ಭದ್ರಾವತಿ, ಸೊರಬದಲ್ಲಿ ಸೊನ್ನೆಗೆ ಜಾರಿಗೆ ಕೊರೊನಾ ಕೇಸ್, ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ?

 

 

ಸುದ್ದಿ ಕಣಜ.ಕಾಂ | DISTRICT | HEALTH
ಶಿವಮೊಗ್ಗ: ಭದ್ರಾವತಿ ಹಾಗೂ ಸೊರಬ ತಾಲೂಕಿನಲ್ಲಿ ಬುಧವಾರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಇನ್ನುಳಿದ ತಾಲೂಕುಗಳಲ್ಲೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

https://www.suddikanaja.com/2021/07/10/covid-relief-in-shivamogga/

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಬುಧವಾರ 31 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 27 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ.
ತಾಲೂಕುವಾರು ವರದಿ‌ | ಶಿವಮೊಗ್ಗದಲ್ಲಿ‌ 7, ಭದ್ರಾವತಿ 0, ಶಿಕಾರಿಪುರ 1, ತೀರ್ಥಹಳ್ಳಿ 9, ಸೊರಬ 0, ಹೊಸನಗರ 2, ಸಾಗರ 8 ಸೋಂಕು ಇರುವುದು ಪತ್ತೆಯಾಗಿದೆ. ಮತ್ತು ಬಾಹ್ಯ ಜಿಲ್ಲೆಯ ಯಾವುದೇ ಪ್ರಕರಣ ಕಂಡುಬಂದಿಲ್ಲ.

READ | ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸೇರಿದ ಕಾಲೇಜಿನ ನಾಲ್ಕು ಬಸ್‍ಗಳಿಂದ 55 ಸಾವಿರ ಮೌಲ್ಯದ ಡೀಸೆಲ್ ಕಳವು!

ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 5,862 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 5,293 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಎಲ್ಲಿ ಎಷ್ಟು ಜನ ಚಿಕಿತ್ಸೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 56 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್‍ಸಿ 20, ಕೋವಿಡ್ ಕೇರ್ ಸೆಂಟರ್ ನಲ್ಲಿ 18, ಖಾಸಗಿ ಆಸ್ಪತ್ರೆಯಲ್ಲಿ 12, ಹೋಮ್ ಐಸೋಲೇಷನ್ ನಲ್ಲಿ 169 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 3 ಸೋಂಕಿತರಿದ್ದಾರೆ. 278 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

https://www.suddikanaja.com/2021/07/03/decline-in-corona-positivity-at-shivamogga/

error: Content is protected !!