ನವೋದಯ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ, ಕುಗ್ರಾಮದ ವಿದ್ಯಾರ್ಥಿಯ ಸಾಧನೆ

ಸುದ್ದಿ ಕಣಜ.ಕಾಂ | TALUK | TALENT JUNCTION
ಸಾಗರ: ಪ್ರಸ್ತುತ 2021-22 ನೇ ಸಾಲಿನ ನವೋದಯ ಪರೀಕ್ಷೆಯಲ್ಲಿ ಸಾಗರ ತಾಲ್ಲೂಕಿನಿಂದ ಮೂರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ತಾಲ್ಲೂಕಿನ ಹಿನ್ನೀರಿನ ದ್ವೀಪ ಪ್ರದೇಶದ ಕುದರೂರು ಗ್ರಾಮದ ಬ್ಯಾಕೋಡಿನ ಸತೀಶ್ ಮತ್ತು ಅನಿತಾ ಎಂಬುವವರ ಪುತ್ರ ಬಿ.ವಿ.ಶ್ರೀವತ್ಸ ಮೊದಲ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ದ್ವಿತೀಯ ಸ್ಥಾನವನ್ನು ಸಂಜಯ್ ಗುಟ್ಟನ ಹಳ್ಳಿ, ತೃತೀಯ ಸ್ಥಾನವನ್ನು ಅನುಶ್ರೀ ಜಿ. ಸೂರನಗದ್ದೆ ಪಡೆದಿದ್ದಾರೆ. ಮೊದಲನೇ ಸ್ಥಾನದಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿ ಹಾರಿಗೆಯ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ನವೋದಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಈ ಭಾಗದ ಜನರಿಗೆ, ಪೆÇೀಷಕರು, ವಿದ್ಯಾ ಸಂಸ್ಥೆ ತೀವ್ರ ಸಂತೋಷ ವ್ಯಕ್ತಪಡಿಸಿದೆ ಎಂದು ಜ್ಞಾನಭಾರತಿ ವಿದ್ಯಾ ಸಂಸ್ಥೆ ತಿಳಿಸಿದೆ.