ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ತಾಲೂಕಿನ ಹೊಳಲೂರಿನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ 10 ದಿನಗಳ `ಕುರಿ ಸಾಕಾಣಿಕೆ’ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು. 7ನೇ ತರಗತಿ ಉತ್ತೀರ್ಣರಾಗಿರಬೇಕು. ಉಚಿತ ತರಬೇತಿಯನ್ನು ಪಡೆದ ನಂತರ ಸ್ವ ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ ವಸತಿ ವ್ಯವಸ್ಥೆ ಇರುತ್ತದೆ. ಹೀಗಾಗಿ, ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ತರಬೇತಿಯು ಅಕ್ಟೋಬರ್ 21ರಿಂದ ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು-577 216 ಇಲ್ಲಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9481955721, 9743429595, 9538271653, ಸಂಪರ್ಕಿಸಬಹುದು.
https://www.suddikanaja.com/2021/09/18/training-in-shivamogga/