ಸುದ್ದಿ ಕಣಜ.ಕಾಂ | DISTRICT | FESTIVAL
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯು ಹಮ್ಮಿಕೊಂಡಿರುವ 2021ನೇ ಸಾಲಿನ ಶಿವಮೊಗ್ಗ ದಸರಾ ಕಾರ್ಯಕ್ರಮದ ಭಾಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಂಗ ದಸರಾ ಪ್ರಯುಕ್ತ ಏಕಪಾತ್ರಾಭಿನಯ, ಮೂಕಾಭಿನಯ ಹಾಗೂ ಲಘು ಪ್ರಹಸನ (ಸ್ಕಿಟ್) ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಸ್ಪರ್ಧೆಗಳು ನಗರದ ಹೆಲಿಪ್ಯಾಡ್ ಬಳಿ ಇರುವ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಆಸಕ್ತರು ಭಾಗವಹಿಸುವಂತೆ ರಂಗ ದಸರಾ ಸಮಿತಿ ಅಧ್ಯಕ್ಷ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಅಕ್ಟೋಬರ್ 10ರಂದು ಮಧ್ಯಾಹ್ನ 3 ಗಂಟೆಯಿಂದ ಮೂಕಾಭಿನಯ ಸ್ಪರ್ಧೆಗಳು ನಡೆಯಲಿವೆ. ಇದು ತಂಡ ಸ್ಪರ್ಧೆಯಾಗಿದ್ದು, 18ರಿಂದ 23 ವರ್ಷ ವಯೋಮಾನದ 6 ಜನರ ತಂಡಕ್ಕೆ ಅವಕಾಶವಿದೆ. ಕಾಲಮಿತಿ ಗರಿಷ್ಠ 6 ನಿಮಿಷ ಇರಲಿದೆ. ಧ್ವನಿಮುದ್ರಿತ ಸಂಗೀತ ಬಳಸಬಹುದು. ವಿಜೇತರಿಗೆ ಪ್ರಥಮ ₹4,000, ದ್ವಿತೀಯ ₹3,000, ತೃತೀಯ ₹2,000 ನಗದು ಬಹುಮಾನವಿದೆ. ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
- ಅಕ್ಟೋಬರ್ 12ರಂದು ಬೆಳಿಗ್ಗೆ 11 ಗಂಟೆಯಿಂದ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ. 8ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯುವುದು. ವೇಷಭೂಷಣಕ್ಕೆ ಆದ್ಯತೆ ನೀಡುವುದಿಲ್ಲ. ಧ್ವನಿಮುದ್ರಿತ ಸಂಗೀತ ಬಳಸುವಂತಿಲ್ಲ. ಸಮಯ ಗರಿಷ್ಠ 5 ನಿಮಿಷ. ವಿಜೇತರಿಗೆ ಪ್ರಥಮ ₹3,000, ದ್ವಿತೀಯ ₹2,000, ತೃತೀಯ ₹1,000 ನಗದು ಬಹುಮಾನ, ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
- ಅಕ್ಟೋಬರ್ 12ರಂದು ಮಧ್ಯಾಹ್ನ 3 ಗಂಟೆಯಿಂದ ಪ್ರಹಸನ ಸ್ಪರ್ಧೆಯನ್ನು ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಗರಿಷ್ಠ 9 ಕಲಾವಿದರು ಹಾಗೂ 3 ನೇಪಥ್ಯ ಕಲಾವಿದರಿಗೆ ಅವಕಾಶವಿದೆ. ಪ್ರಹಸನದ ಅವಧಿ 10 ನಿಮಿಷ ಮೀರಬಾರದು. ಧ್ವನಿಮುದ್ರಿತ ಸಂಗೀತ ಬಳಸಬಹುದು. ವಿಜೇತರಿಗೆ ಪ್ರಥಮ ₹4,000, ದ್ವಿತೀಯ ₹3,000, ತೃತೀಯ ₹2,000 ನಗದು ಬಹುಮಾನ. ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು ಹೆಸರುಗಳನ್ನು ನೋಂದಾಯಿಸಲು ಈ ಕೆಳಕಂಡವರನ್ನು ಸಂಪರ್ಕಿಸಬಹುದು
ಏಕಪಾತ್ರಾಭಿನಯ
ಧನಲಕ್ಷ್ಮಿ (83103 22906),
ವಿನೀತ್ (88674 42884)
ಮಧು ನಾಯ್ಕ್.ಎನ್ (9591484269),
ಪ್ರಹಸನ ಸ್ಪರ್ಧೆ (ಸ್ಕಿಟ್)
ಶುಭ ಟಿ.ಆರ್. (91647 41585)
ಸುರೇಶ್ ಕೆ. (9986811496),
ಮಧು ನಾಯ್ಕ್ ಎನ್. (95914 84269),
ಮೂಕಾಭಿನಯ ಸ್ಪರ್ಧೆ (ಮೈಮ್)
ಮೋಕ್ಷಕಾಂತ (9986815578)
ರೂಪ ಬಿ.ಪಿ (94817 02926)
ಜಿ.ನಾಗರಾಜ್ (94853 75164)
ಸುರೇಶ್.ಕೆ (99868 11496)
ಶಿವಮೊಗ್ಗ ದಸರಾ ರೂಪುರೇಷೆ ಪ್ರಕಟ, ಷರತ್ತುಗಳಡಿ ನಡೆಯಲಿದೆ ಹಬ್ಬ ಆಚರಣೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ