ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಫ್.ಡಿ.ಎ ಆಗಿ ಕಾರ್ಯನಿರ್ವಹಿಸುತ್ತಿರುವ ಗಿರಿರಾಜ್ ಅವರು ಶಿವಮೊಗ್ಗಕ್ಕೆ ಕರೆದುಕೊಂಡು ಬರಲಾಗಿದೆ.
READ | ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ಪತ್ತೆ, ಎಲ್ಲಿ ಗೊತ್ತಾ?
ಸೆಪ್ಟೆಂಬರ್ 28ರಂದು ಮನೆಯಿಂದ ನಾಪತ್ತೆಯಾಗಿ ಡೆತ್ ನೋಟ್ ಕಳುಹಿಸಿದ್ದ ಗಿರಿರಾಜ್ ಅವರು ಗುರುವಾರ ರಾತ್ರಿ ಧರ್ಮಸ್ಥಳದಲ್ಲಿ ಸುಸ್ತಾಗಿ ಮಲಗಿದ್ದ ಅವರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರನ್ನು ಉಜಿರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶಿವಮೊಗ್ಗದ ಜಯನಗರ ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ಅವರನ್ನು ಶುಕ್ರವಾರ ಸಂಜೆ ಶಿವಮೊಗ್ಗಕ್ಕೆ ಕರೆ ತರಲಾಗಿದೆ. ಬಳಿಕ ಅವರ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ.