ಸುದ್ದಿ ಕಣಜ.ಕಾಂ | DISTRICT | SHIVAMOGGA DASARA
ಶಿವಮೊಗ್ಗ: ನಾಡ ಹಬ್ಬ ದಸರಾ ಪ್ರಯುಕ್ತ ಅಕ್ಟೋಬರ್ 9ರಂದಿ ನಾನಾ ಕಾರ್ಯಕ್ರಮಗಳು ನಡೆಯಲಿವೆ.
ರಂಗ ದಸರಾ
ಸಂಜೆ 5.30 ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಗೀತೆ ಗಾಯನ ಹಾಗೂ ‘ಮಾತೆ ಮಂಡೋದರಿ’ ನಾಟಕ ಪ್ರದರ್ಶನ.
ಪರಿಸರ ದಸರಾ
ಬೆಳಗ್ಗೆ 11 ಗಂಟೆಗೆ ಬಿ.ಎಚ್ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ.
ಕಲಾ ದಸರಾ
ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಛಾಯಾಚಿತ್ರ ಮತ್ತು ಚಿತ್ರಕಲಾ ಪ್ರದರ್ಶನ.
ಮಕ್ಕಳ ದಸರಾ
ಬೆಳಗ್ಗೆ 8 ಗಂಟೆಗೆ ಆಯಾ ಕ್ಲಸ್ಟರ್ ನ ಆಯ್ದ ಸ್ಥಳಗಳಲ್ಲಿ ದಸರಾ ನಡಿಗೆ. ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಆಟೋಟ ಕಾರ್ಯಕ್ರಮಗಳು. ಸಂಜೆ 6 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು.
ಆಹಾರ ದಸರಾ
ಮಧ್ಯಾಹ್ನ 3ರಿಂದ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಮಹಿಳಾ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಗ್ಯಾಸ್ ಒಲೆ ಬಳಸಿ ಅಡುಗೆ ಮಾಡುವ ಸ್ಪರ್ಧೆ.
ಅ.10ರಂದು ನಡೆಯುವ ಕಾರ್ಯಕ್ರಮಗಳು:
ರಂಗದಸರಾ
ಮಧ್ಯಾಹ್ನ 3 ಗಂಟೆಯಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ “ಕಾಲೇಜು ರಂಗ” ಮೂಕಾಭಿನಯ.
ಸಾಂಸ್ಕೃತಿಕ ದಸರಾ
ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಮಟ್ಟದ ಚರ್ಮವಾದ್ಯಗಳ ಡೊಳ್ಳು ಮತ್ತು ವೀರಗಾಸೆ ಸ್ಪರ್ಧೆ.
ಪರಿಸರ ದಸರಾ
ಬೆಳಗ್ಗೆ 7 ಗಂಟೆಗೆ ಫ್ರೀಡಂ ಪಾರ್ಕ್ ಆವರಣದಿಂದ ಸೈಕಲ್ ಜಾಥಾ.
ರೈತ ದಸರಾ
ಬೆ.8 ಗಂಟೆಗೆ ಹರಿಗೆ-ಮಲವಗೊಪ್ಪದಲ್ಲಿ ಕೆಸರುಗದ್ದೆ ಓಟದ ಸ್ಪರ್ಧೆ.
ಕಲಾ ದಸರಾ
ಬೆ.10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ 20 ಕಲಾವಿದರಿಂದ ಸ್ಥಳದಲ್ಲೇ ಚಿತ್ರ ಬಿಡಿಸುವ ಕಾರ್ಯಕ್ರಮ. ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು.
ಯೋಗ ದಸರಾ
ಬೆ.6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ, ಬೆ.8ರಿಂದ ಯೋಗ ನಡಿಗೆ. ಸಂಜೆ 5.30ಕ್ಕೆ ಯೋಗ ಸಂಭ್ರಮ ಕಾರ್ಯಕ್ರಮ.
ಆಹಾರ ದಸರಾ
ಬೆಳಗ್ಗೆ 8.30ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಒಂದು ನಿಮಿಷದಲ್ಲಿ ಇಡ್ಲಿ ತಿನ್ನುವ ಹಾಗೂ 9.30 ಕ್ಕೆ ಬಾಳೆಹಣ್ಣು ತಿನ್ನುವ ಸ್ಪರ್ಧೆ ನಡೆಯಲಿವೆ. ಅ.10ರಿಂದ 14ರ ವರೆಗೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿದಿನ ಸಂಜೆ 5 ಗಂಟೆಯಿಂದ ಆಹಾರ ಮೇಳ.
ಅ.11ರಂದು ನಡೆಯುವ ಕಾರ್ಯಕ್ರಮಗಳು
ರಂಗದಸರಾ
ಸಂಜೆ 5.30ರಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಗೀತೆಗಳ ಗಾಯನ, ಸಂಜೆ 6.30ರಿಂದ “ತೂರಬೇಡಿ ಗಾಳಿಗೆ” ನಾಟಕ ಪ್ರದರ್ಶನ.
ಯುವದಸರಾ
ಬೆ.9 ಗಂಟೆಯಿಂದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ “ಕರಾಟೆ ಸ್ಪರ್ಧೆ”, ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಯಲಿವೆ.
ನಾಡಹಬ್ಬ ‘ಶಿವಮೊಗ್ಗ ದಸರಾ’ಕ್ಕೆ ವಿದ್ಯುಕ್ತ ಚಾಲನೆ, ಬೆಳ್ಳಿಯ ಚಾಮುಂಡೇಶ್ವರಿ ದೇವಿ ವಿಗ್ರಹ ಮೆರವಣಿಗೆ