ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಗೋಂದಿ ಚಾನೆಲ್ ಹತ್ತಿರ ಓಮ್ನಿಯಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದಾರೆ.
ಕೂಲಿ ಬ್ಲಾಕ್ ಶೆಡ್ ನಿವಾಸಿ ಮಧು(25) ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ಅಂದಾಜು ?75,000 ಮೌಲ್ಯದ ಒಟ್ಟು 5 ಕೆಜಿ ಒಣ ಗಾಂಜಾ, 2 ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಓಮ್ನಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆಂಧ್ರದಿಂದ ಭದ್ರಾವತಿಗೆ ಗಾಂಜಾ ಸಪ್ಲೈ
ಅಧಿಕೃತ ಮೂಲಗಳು ಪ್ರಕಾರ, ಗಾಂಜಾವನ್ನು ಆಂಧ್ರದಿತರೀಕೆರೆ ಮಾರ್ಗವಾಗಿ ಭÀದ್ರಾವತಿ ಕಡೆಗೆ ಗಾಂಜಾ ಸಾಗಾಟ ಮಾಡಲಾಗುತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೇಪರ್ ಟೌನ್ ಪೆÇಲೀಸ್ ಠಾಣಾ ಪಿಎಸ್ಐ ನೇತೃತ್ವದಲ್ಲಿ ಸಿಬ್ಬಂದಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸಿಲ್ವರ್ ಬಣ್ಣದ ಓಮ್ನಿ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಮಾದಕ ವಸ್ತು ಗಾಂಜಾ ಇರುವುದು ಕಂಡುಬಂದಿದೆ. ನಂತರ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಾಗಿದೆ.