ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಜಿಲ್ಲೆಯಲ್ಲಿ 2021ರ ಏಪ್ರಿಲ್-ಸೆಪ್ಟಂಬರ್ವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ₹11.42 ಲಕ್ಷ ದಂಡ ವಿಧಿಸಲಾಗಿದೆ.
ತೂಕ, ಅಳತೆ ಸಾಧನಗಳ ಸತ್ಯಾಪನೆ, ಮುದ್ರೆಯಿಂದ ₹42,54,768 ಶುಲ್ಕ ಸಂಗ್ರಹಿಸಲಾಗಿದೆ. 1,271 ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳನ್ನು ತಪಾಸಣೆ ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ 520 ಪ್ರಕರಣಗಳನ್ನು ದಾಖಲಾಗಿದೆ.
ರಾಜಿ ಅಭಿಸಂದಾನದ ಮೂಲಕ 513 ಮೊಕದ್ದಮೆಗಳ ಇತ್ಯರ್ಥ ಪಡಿಸಲಾಗಿದೆ. ಒಟ್ಟು ₹11,42,500 ದಂಡವನ್ನು ವಿಧಿಸಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಮಂಜುನಾಥ್ ತಿಳಿಸಿದ್ದಾರೆ.