ಸುದ್ದಿ ಕಣಜ.ಕಾಂ | KARNATAKA | JOB JUNCTION
ಮಂಗಳೂರು: ಮಂಗಳೂರಿನ ಕಸ್ಟಮ್ಸ್ ಕಮಿಷನರೇಟ್ ಕಚೇರಿಯಲ್ಲಿ ಎಂಟನೇ, ಹತ್ತನೇ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸುವರ್ಣ ಅವಕಾಶವಿದೆ.
ಅರ್ಹ ಅಭ್ಯರ್ಥಿಗಳು ಕಸ್ಟಮ್ಸ್ ಆಯುಕ್ತರ ಕಚೇರಿ, ಹೊಸ ಕಸ್ಟಮ್ಸ್ ಹೌಸ್, ಪಣಂಬೂರ್, ಮಂಗಳೂರು 575010 ಈ ವಿಳಾಸಕ್ಕೆ ಅರ್ಜಿಗಳನ್ನು ಪೋಸ್ಟ್ ಮೂಲಕ ಸಲ್ಲಿಸಬಹುದಾಗಿದೆ. ನವೆಂಬರ್ 30 ಅರ್ಜಿ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ.
ಸಿ-ಗ್ರೂಪ್ ನ ಒಟ್ಟು 19 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ನಡೆಯಲಿದೆ. ಇದರಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗದ ಕನಸು ಈಡೇರಲಿದೆ.
ಹುದ್ದೆ ಹೆಸರು | ಹುದ್ದೆ ಸಂಖ್ಯೆ | ವಿದ್ಯಾರ್ಹತೆ | ವೇತನ | ವಯೋಮಿತಿ |
ಸೀಮ್ಯಾನ್ | 7 | 10ನೇ ತರಗತಿ/ ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಹೆಲ್ಮ್ಸ್ ಮ್ಯಾನ್ ಮತ್ತು ಸೀಮ್ಯಾನ್ ವೃತ್ತಿಯಲ್ಲಿ 2 ವರ್ಷ ಅನುಭವ | 18,000-56,900 | 18-25 ವರ್ಷ |
ಗ್ರೀಸರ್ | 3 | 10ನೇ ತರಗತಿ/ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಮುಖ್ಯ ಮತ್ತು ಆಕ್ಸಿಲಿಯರಿ ಮೆಷಿನರಿ ನಿರ್ವಹಣೆಯಲ್ಲಿ ಕನಿಷ್ಠ 3 ವರ್ಷದ ವೃತ್ತಿ ಅನುಭವ | 18,000-56,900 | 18-25 ವರ್ಷ |
ಟ್ರೇಡ್ಸ್ ಮ್ಯಾನ್ | 1 | ಮೆಕ್ಯಾನಿಕ್/ ಡೀಸೆಲ್/ ಫಿಟ್ಟರ್/ ಟರ್ನರ್/ ವೆಲ್ಡರ್/ ಎಲೆಕ್ಟ್ರಿಷಿಯನ್/ ಇನ್ ಸ್ಟ್ರುಮೆಂಟಲ್ ಮತ್ತು ಕಾರ್ಪೆಂಟ್ರಿ ಯಾವುದೇ ವಿಭಾಗದಲ್ಲಿ ಐಟಿಐ ಉತ್ತೀರ್ಣರಾಗಿರಬೇಕು | 19,900-63,200 | 25 ವರ್ಷ ಮೀರಿರುವಂತಿಲ್ಲ |
ಲಾಂಚ್ ಮೆಕ್ಯಾನಿಕ್ | 2 | 8ನೇ ತರಗತಿ ಉತ್ತೀರ್ಣರಾಗಿದ್ದು, ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಜೊತೆಗೆ 1 ವರ್ಷ ಎಂಜಿನ್ ಮತ್ತು ಅಕ್ಸಿಲರಿ ಮೆಷಿನರಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿರಬೇಕು. | 25,500-81,100 | 30 ವರ್ಷ |
ಸುಖನಿ | 1 | 8ನೇ ತರಗತಿ ಉತ್ತೀರ್ಣರಾಗಿದ್ದು, ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 7 ವರ್ಷ ವೃತ್ತಿ ಅನುಭವ, 2 ವರ್ಷ ಮೆಕ್ಯಾನೈಸ್ಡ್ ಕ್ರಾಫ್ಟ್ ಮತ್ತು ಆಕ್ಸಿಲರಿ ಸೇಲ್ಸ್ ನಲ್ಲಿ ಸ್ವತಂತ್ರವಾಗಿ ವೃತ್ತಿ ನಿರ್ವಹಣೆ | 25,500-81,100 | 30 ವರ್ಷ |
ಸೀನಿಯರ್ ಡೆಕ್ಕಾಂದ್ | 2 | 8ನೇ ತರಗತಿ ಪಾಸಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 5 ವರ್ಷ ವೃತ್ತಿ ಅನುಭವ ಹಾಗೂ 2 ವರ್ಷ ಹೆಲ್ಮ್ಸ್ ಮ್ಯಾನ್ ಮತ್ತು ಸೀಮ್ಯಾನ್ ವೃತ್ತಿ ನಿರ್ವಹಿಸಿರಬೇಕು. | 21,700-69,100 | 30 ವರ್ಷ |
ಎಂಜಿನ್ ಡ್ರೈವರ್ | 3 | 8ನೇ ತರಗತಿ/ ಮೆಟ್ರಿಕ್ ಉತ್ತೀರ್ಣರಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 10 ವರ್ಷದ ವೃತ್ತಿ ಅನುಭವ ಹಾಗೂ ಆಕ್ಸಿಲರಿ ಮೆಷನರಿಯಲ್ಲಿ 1 ವರ್ಷ ಸ್ವತಂತ್ರವಾಗಿ ಕೆಲಸ ನಿರ್ವಹಿಸಿರಬೇಕು. | 25,500-81,100 | 35 ವರ್ಷ |
https://www.suddikanaja.com/2021/09/28/jobs-in-iocl/