ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2021-22ನೇ ಸಾಲಿನ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಹಾಗೂ ಮಾಧ್ಯಮ ಚಟುವಟಿಕೆಗಳ ನಿರ್ವಹಣೆ ಕುರಿತು ತರಬೇತಿ ಪಡೆಯಲಿಚ್ಚಿಸುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು ಪತ್ರಿಕೋದ್ಯಮ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪಡೆದವರಾಗಿರಬೇಕು. ಕನ್ನಡ, ಇಂಗ್ಲಿಷ್ ಭಾಷೆಯ ಓದು ಮತ್ತು ಬರಹ ಬಲ್ಲವರಾಗಿದ್ದು, ಕಂಪ್ಯೂಟರ್ ಜ್ಞಾನ ಹೊಂದಿದವರಾಗಿರಬೇಕು.
10 ತಿಂಗಳ ತರಬೇತಿ ಇದಾಗಿದ್ದು, ಪರಿಶಿಷ್ಟ ಜಾತಿಯ ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
READ | ಮಂಗಳೂರು ಕಸ್ಟಮ್ಸ್ ಕಚೇರಿಯಲ್ಲಿ 8, 10ನೇ, ಐಟಿಐ ಪಾಸಾದವರಿಗೆ ಉದ್ಯೋಗ ಅವಕಾಶ, ಆಕರ್ಷಕ ವೇತನ
ಮಾಸಿಕ ₹15,000 ಶಿಷ್ಯವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ₹15,000 ಗಳ ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ನೆರೆಯ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಈ ಹಿಂದೆ ಅರ್ಜಿ ಸಲ್ಲಿಸಿ, ಆಯ್ಕೆಯಾಗಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
ಅರ್ಹರು ತಮ್ಮ ಸ್ವವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ನವೆಂಬರ್ 2ರೊಳಗಾಗಿ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್.ಎಂ.ವಿ.ರಸ್ತೆ, ಶಿವಮೊಗ್ಗ-577201 ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಇಲಾಖೆಯ ಇಮೇಲ್ varthabhavansmg1@gmai.com ಅಥವಾ ದೂರವಾಣಿ ಸಂಖ್ಯೆ 08182-278638 ಅನ್ನು ಸಂಪರ್ಕಿಸಬಹುದು.
JOBS IN NPCIL | ಎನ್ಪಿಸಿಐಎಲ್ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಸಲು 11 ದಿನ ಮಾತ್ರ ಬಾಕಿ