ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಾಡಿಕೊಪ್ಪ ಸಮೀಪದ ಶನಿವಾರ ನಡೆದಿದೆ.
ಆಯನೂರು ಗ್ರಾಮದ ನಿವಾಸಿ ಕೌಸರ್ ಫಿಜಾ(19) ಕೊಲೆಯಾದ ಗೃಹಿಣಿ. ಈಕೆಯನ್ನು ಟಿಪ್ಪುನಗರದ ನಿವಾಸಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು.
ಕೌಸರ್ ಫಿಜಾ ಅವರ ಮನೆಯವರು ಅವಳ ಗಂಡನಿಗೆ ಗುಜರಿ ವ್ಯಾಪಾರ ಮಾಡಲು ಅಂಗಡಿ ಹಾಕಿಕೊಟ್ಟಿದ್ದರು. ಆದರೆ ವ್ಯಾಪಾರದಿಂದ ಬಂದ ಹಣವನ್ನೆಲ್ಲ ಖರ್ಚು ಮಾಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಣ ಖರ್ಚು ಮಾಡುತ್ತಾರೆ ಎಂಬ ವಿಚಾರವಾಗಿ ಪತಿ, ಪತ್ನಿಯ ನಡುವೆ ಗಲಾಟೆಯೂ ನಡೆಯುತಿತ್ತು. ಕಿರುಕುಳ ಕೂಡ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗಿ ಕೌಸರ್ ಫಿಜಾ ಅವರು ತವರು ಮನೆಗೆ ಹೋಗಿದ್ದರು.
ಹೊಸ ಬಾಡಿಗೆ ಮನೆ ನೋಡಲು ಕರೆದು ಕೊಲೆ
ತವರು ಮನೆಯಲ್ಲಿದ್ದ ಕೌಸರ್ ಫಿಜಾ ಅವರನ್ನು ಅಕ್ಟೋಬರ್ 16ರಂದು ಗಂಡನು ಬೇರೆ ಬಾಡಿಗೆ ಮಾಡುತ್ತಿದ್ದು, ಕಂಪ್ಯೂಟರ್ ಕ್ಲಾಸ್ ಗೆ ಹೋಗುವಾಗ ಮನೆ ನೋಡುವಂತೆ ತಿಳಿಸಿದ್ದರು. ಆಕೆಯು ಬಂದಾಗ ಗಾಡಿಕೊಪ್ಪ ಗ್ರಾಮದ ಹತ್ತಿರ ಚಾಕುಯಿಂದ ಚುಚ್ಚಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಮೃತಳ ತಾಯಿಯು ದೂರು ನೀಡಿದ್ದು, ಕೌಸರ್ ಅವರ ಗಂಡನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 498(ಎ), 302 ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
https://www.suddikanaja.com/2020/12/12/mother-killed-her-own-child-in-bengaluru/